ಪುತ್ತೂರು:ಪುತ್ತೂರು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ವತಿಯಿಂದ ಸಸ್ಯ ಪೊಷಕಾಂಷ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ ಮುಂಡೂರು ಸಮುದಾಯ ಭವನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಸುರೇಶ್ ಪ್ರಭು ಅಡಿಕೆ ಕೃಷಿಯಲ್ಲಿ ಗೊಬ್ಬರ, ನೀರು ನಿರ್ವಹಣೆ, ಜೀವಾಮೃತ ತಯಾರಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟ ಅಧ್ಯಕ್ಷರಾದ ಪುಷ್ಪ ವಹಿಸದ್ದರು. ಕಾರ್ಯಕ್ರಮದಲ್ಲಿ ಕೆಮ್ಮಿಂಜೆ ವಲಯಾದ್ಯಕ್ಷ ಸುಂದರ ಬಲ್ಯಾಯ, ಮತ್ತು ಬಾಲಚಂದ್ರ ಗೌಡ ಉಪಸ್ಥಿತರಿದ್ದರು. .
ಕೃಷಿ ಮೇಲ್ವಿಚಾರಕ ಶಿವರಂಜನ್ ಸ್ವಾಗತಿಸಿ, ಸೇವಾಪ್ರತಿನಿಧಿ ಗೀತಾ ವಂದಿಸಿದರು. ಆಸಕ್ತ ರೈತರು ಭಾಗವಹಿಸಿದ್ದರು.