ಪುತ್ತೂರು: ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ಜ.4ರಂದು ನಡೆಯಲಿರುವ 16 ನೇ ವರ್ಷದ ನೇಮೋತ್ಸವದ ಆಮಂತ್ರಣ ಪತ್ರವನ್ನು ಶಾಸಕ ಆಶೋಕ್ ಕುಮಾರ್ ರೈ ಯವರಿಗೆ ನೀಡಲಾಯಿತು.
ಪಾಂಗಳಾಯಿ ಮುಂಡ್ಯತ್ತಾಯ ದೇವಸ್ಥಾನದ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ್ ,ಮಾಜಿ ಅಧ್ಯಕ್ಷ ತಾರಾನಾಥ ರೈ, ಖಜಾಂಚಿ ಜಯಶಂಕರ್ ರೈ, ಸಮಿತಿಯ ಸದಸ್ಯರಾದ ವಾಸು ಪೂಜಾರಿ, ಪರಮೇಶ್ವರ ನಾಯ್ಕ್, ಕರುಣಾಕರ ಆಲೆಟ್ಟಿ ಈ ಸಂದರ್ಭ ಜೊತೆಗಿದ್ದರು.