ಕೊರಿಂಗಿಲ ಮಿಸ್ಬಾಹುಲ್ ಇಸ್ಲಾಂ ಸ್ಟೂಡೆಂಟ್ ಅಸೋಸಿಯೇಷನ್ ಸೌದಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಮಿಸ್ಬಾಹುಲ್ ಇಸ್ಲಾಂ ಸ್ಟೂಡೆಂಟ್ ಅಸೋಸಿಯೇಷನ್ ಸೌದಿ ಸಮಿತಿಯ ನೂತನ ಅಧ್ಯಕ್ಷರಾಗಿ ಸಿರಾಜ್ ಅಂಕತಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉದೈಫ್ ಕೆಎಂಕೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಲತೀಫ್ ಹಾಜಿ ಕಲ್ಮರ ಉಪಾಧ್ಯಕ್ಷರಾಗಿ ಕರೀಂ ಉಸ್ತಾದ್, ಜೊತೆ ಕಾರ್ಯದರ್ಶಿಯಾಗಿ ಜಲೀಲ್ ಕೇಕನಾಜೆ, ಕೋಶಾಧಿಕಾರಿಯಾಗಿ ಮುಜೀಬ್ ಕೇಕಾನಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಝಕರಿಯ ಕೋರಿಂಗಿಲ, ಹಾಗೂ ಪತ್ರಿಕಾ ಪ್ರತಿನಿಧಿಯಾಗಿ ಅಮ್ಮಿ ಕೊರಿಂಗಿಲ ಆಯ್ಕೆಯಾದರು. ಅಲ್ಲದೇ 12 ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು. ಜಲೀಲ್ ಕೇಕನಾಜೆ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಲತೀಫ್ ಹಾಜಿ ಕಲ್ಮರ ಉದ್ಘಾಟಿಸಿದರು. ಕರೀಂ ಉಸ್ತಾದ್ ದುವಾ ನೆರವೇರಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಕೋರಿಂಗಿಲ ವರದಿ ವಾಚಿಸಿದರು. ಮುಜಮ್ಮಿಲ್ ಕೆಎಂಕೆ ವಂದಿಸಿದರು.

LEAVE A REPLY

Please enter your comment!
Please enter your name here