ಎಸ್‌ಎಂಎ ದ.ಕ ಸೌತ್ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

0

ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ, ಪ್ರ.ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ

ಪುತ್ತೂರು: ಕರ್ನಾಟಕ ರಾಜ್ಯ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್(ಎಸ್‌ಎಂಎ) ರಾಜ್ಯ ಸಮಿತಿಯ ನಾಯಕರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಈಸ್ಟ್ ಹಾಗೂ ವೆಸ್ಟ್ ಜಿಲ್ಲೆಯ ಜಂಟಿ ಮಹಾ ಸಭೆಯಲ್ಲಿ ದಕ್ಷಿಣ ಕನ್ನಡ ಸೌತ್ ಜಿಲ್ಲಾ ಸಮಿತಿಯನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಯಿತು. ಬಿ.ಸಿ ರೋಡು ಲಯನ್ಸ್ ಭವನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.


ಮಹಾಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಂಘಟನಾ ವಿಭಾಗ ಉಪಾಧ್ಯಕ್ಷರಾದ ಕೆ ಕೆ ಎಂ ಕಾಮಿಲ್ ಸಖಾಫಿ ವಹಿಸಿದ್ದರು. ಎಸ್ ಎಂ ಎ ರಾಜ್ಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಕಾರ್ಯಕ್ರಮ ಉದ್ಘಾಟಿಸಿದರು. ವೀಕ್ಷಕರಾಗಿ ರಾಜ್ಯ ಎಸ್‌ಎಂಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಮಾನ್ ಮದನಿ ಜಪ್ಪು ಭಾಗವಹಿಸಿ ನೂತನ ಜಿಲ್ಲೆಯ ರಚನೆ ಪ್ರಕ್ರಿಯೆ ನಡೆಸಿದರು.


ದಕ್ಷಿಣ ಕನ್ನಡ ಸೌತ್ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಯೂಸುಫ್ ಸಾಜ ಗೌಸಿಯಾ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಸಖಾಫಿ ಕೊಳಕೆ, ಕೋಶಾಧಿಕಾರಿಯಾಗಿ ಸಿ ಎಚ್ ಮೊಹಮ್ಮದ್ ಹಾಜಿ ಬಾಳೆಪುಣಿ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಹಮಾನ್ ಸಂಪಿಲ, ಮಹಮ್ಮದ್ ಮಾಣಿ, ಆಲಿಕುಂಞಿ ಹಾಜಿ ಮೋಂಟುಗೋಳಿ,ಲತೀಫ್ ಸಖಾಫಿ ಮುಡಿಪು, ಕಾರ್ಯದರ್ಶಿಗಳಾಗಿ ಅಬ್ಬಾಸ್ ಸರ್ಕಳ, ಅಕ್ಬರ್ ಅಲಿ ಮದನಿ, ಹಬೀಬ್ ರಹ್ಮಾನ್, ರಫೀಕ್ ಝುಹ್ರಿ ಹಾಗೂ 25 ಮಂದಿ ಸದಸ್ಯರನ್ನು ಒಳಗೊಂಡ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ಸಯ್ಯದ್ ಹಾಮಿದ್ ತಂಙಳ್ ಮರ್ದಾಳ, ರಾಜ್ಯ ನಾಯಕರಾದ ಅಬ್ದುಲ್ ಖಾದರ್ ಹಾಜಿ, ಅಶ್ರಫ್ ಸಖಾಫಿ ಮೂಡಡ್ಕ, ಎಂಬಿಎಂ ಸಾಧಿಕ್ ಮಾಸ್ಟರ್ , ಮಲ್ಲೂರು ಅಶ್ರಫ್ ಸಅದಿ ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ಸಖಾಫಿ ಸ್ವಾಗತಿಸಿದರು. ಈಸ್ಟ್ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ ವಂದಿಸಿದರು.

LEAVE A REPLY

Please enter your comment!
Please enter your name here