ಅಧ್ಯಕ್ಷರಾಗಿ ಶ್ರೀನಿವಾಸ ಪ್ರಸಾಸ್ ಎಸ್.ಪಿ ಸೂರ್ಯಂಬೈಲು, ಉಪಾಧ್ಯಕ್ಷರಾಗಿ ಅಂಬಿಕಾ ಭರಣ್ಯ ಆಯ್ಕೆ
ನಿಡ್ಪಳ್ಳಿ: ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಪಾಣಾಜೆ ಇದರ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸ ಪ್ರಸಾದ್ ಎಸ್.ಪಿ ಸೂರ್ಯಂಬೈಲು ಹಾಗೂ ಉಪಾಧ್ಯಕ್ಷರಾಗಿ ಅಂಬಿಕಾ ಭರಣ್ಯ ಇವರು ಆಯ್ಕೆಯಾದರು. ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾರವರ ಅಧ್ಯಕ್ಷತೆಯಲ್ಲಿ ಡಿ.24ರಂದು ನಡೆದ ಪೋಷಕರ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಪೋಷಕ ಪ್ರತಿನಿಧಿಗಳಾಗಿ ಸುರೇಶ್ ನಾಯ್ಕ, ಮಧುಸೂದನ, ಕೃಷ್ಣ ನಾಯ್ಕ, ಶಂಕರ ಭರಣ್ಯ, ನಾರಾಯಣ ಬಿ.ಕೆ, ಗುಣಶೀಲ, ಪಾರ್ವತಿ , ಮಹೇಶ್, ಸುನೀತಾ ಬಿ, ಉಷಾ ಬಾಜುಗುಳಿ, ಗೀತಾ ಎಸ್, ಈಶ್ವರಿ, ನಟರಾಜ್ ಕೆ, ನಳಿನಾಕ್ಷಿ, ನಾಗವೇಣಿ, ಸುನೀತಾ ತಾರಾನಾಥ್ ಆಯ್ಕೆ ಗೊಂಡರು. ಪಂಚಾಯತ್ ವಾರ್ಡ್ ಸದಸ್ಯರಾದ ಸುಲೋಚನಾ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಊರ್ಮಿಳಾ ಇಲಾಖಾ ನಿಯಮಗಳನ್ನು ಪರಿಚಯಿಸಿದರು.ಎಸ್.ಡಿ.ಎಂ.ಸಿಯ ನಿಕಟ ಪೂರ್ವ ಅಧ್ಯಕ್ಷರಾದ ಸುನೀತಾ ತಾರಾನಾಥ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಶಾಲಾ ಸಹಶಿಕ್ಷಕ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಪವಿತ್ರ ಎಂ. ಆರ್ ಸಹಕರಿಸಿದರು.