ಮನೆಯಲ್ಲಿ ಹಳೆಯ ಅಥವಾ ಹರಿದ ರೇಷ್ಮೆ ಸೀರೆಗಳ ಸಹಿತ ಹಲವು ಬಗೆಯ ರೇಷ್ಮೆ ಉಡುಪುಗಳಿವೆಯೇ…??? ಹಾಗದರೆ ನಿಮಗೊಂದು ಅವಕಾಶವಿದೆ

0

ಪುತ್ತೂರು: ಮನೆಯಲ್ಲಿ ಉಪಯೋಗಕ್ಕೆ ಬಾರದ ಇರುವ ಬೆಳ್ಳಿಯ ಜರಿ ಹೊಂದಿರುವಂತಹ ಹಳೆಯ ಅಥವಾ ಹರಿದ ಸ್ಥಿತಿಯಲ್ಲಿರುವ ಹೆಸರಾಂತ ಕಾಂಚಿಪುರಂ, ಬನಾರಸ್, ಧರ್ಮವರಂ ಹಾಗೂ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಸಹಿತ ರೇಷ್ಮೆ ಪಂಚೆ ಮತ್ತು ರೇಷ್ಮೆ ಲಂಗ ಇವುಗಳ ಖರೀದಿ ಮೇಳವು ಡಿ.26 ರಂದು ಪುತ್ತೂರಿನಲ್ಲಿ ಪ್ರಾರಂಭಗೊಂಡಿದೆ.

ಶ್ರೀ ಕಾಂಚಿಪುರಂ ರೇಷ್ಮೆ ಸಾರಿ ಸೆಂಟರ್ ಇದರ ವತಿಯಿಂದ ತೆಂಕಿಲ ಬೈಪಾಸ್ ಬಳಿಯ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆರಂಭಗೊಂಡಿರುವ ಈ ಸಾರಿ ಮೇಳದಲ್ಲಿ ಗ್ರಾಹಕರು ತಮ್ಮ ಬಳಿಯಿರುವ ಹಳೆಯದಾದ ಅಥವಾ ಹರಿದ ರೇಷ್ಮೆ ಸೀರೆಗಳ ಸಹಿತ ಇನ್ನೂ ಹಲವು ರೀತಿಯ ರೇಷ್ಮೆ ಉಡುಪುಗಳನ್ನು ಹೆಸರಾಂತ ಶ್ರೀ ಕಾಂಚಿಪುರಂ ರೇಷ್ಮೆ ಸಾರಿ ಸೆಂಟರ್ ಸಂಸ್ಥೆ ಅತ್ಯುತ್ತಮ ಬೆಲೆಗೆ ಕೊಂಡುಕೊಳ್ಳಲು ಸಿದ್ಧವೆಂದು ಆಯೋಜಕರು ತಿಳಿಸಿದ್ದಾರೆ.


ತಾವು ನೀಡುವಂತಹ ಪ್ರತಿ ಸೀರೆ ಮತ್ತು ಇನ್ನಿತರ ರೇಷ್ಮೆ ಉಡುಪುಗಳಿಗೆ ಸುಮಾರು 3 ಸಾವಿರದಿಂದ 30 ಸಾವಿರ ರೂಪಾಯಿಗಳನ್ನು ಪಡೆಯುವ ಅವಕಾಶವು ಇದೆಯೆಂದು ಹೇಳಿಕೊಂಡಿರುವ ಸಂಸ್ಥೆಯೂ 5 ದಿನಗಳ ಕಾಲ ನಡೆಯಲಿರುವ ಈ ಬೃಹತ್ ಸಾರಿ ಮೇಳವನ್ನು ಡಿ.30 ರಂದು ಕೊನೆಗೊಳಿಸಲಿದೆ. ಆಸಕ್ತ ಗ್ರಾಹಕರು ಈ ಹಳೆಯ ಸಾರಿ ಖರೀದಿ ಮೇಳದ ಪ್ರಯೋಜನ ಪಡೆಯುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

  • ಹಳೆಯ ರೇಷ್ಮೆ ಸೀರೆಗಳನ್ನು ನೀಡಿ ಸಾವಿರಾರು ರೂಪಾಯಿ ಪಡೆಯೋ ಅವಕಾಶ. ಪ್ರತಿ ಸಾರಿ ಸಹಿತ ಇನ್ನಿತರ ರೇಷ್ಮೆ ಉಡುಪುಗಳ ಖರೀದಿಗೆ ಸುಮಾರು 3 ರಿಂದ 30 ಸಾವಿರ ರೂ. ಸಿಗಲಿದೆ. ಕೇವಲ 5 ದಿನಗಳವರೆಗೆ ಮಾತ್ರವಿದ್ದು, ಮಾಹಿತಿಗಾಗಿ -7708977496/9042349487 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here