ಪುತ್ತೂರು: ಮಂಗಳೂರಿನ ಡಿಎಆರ್ ಮೈದಾನದಲ್ಲಿ ಡಿ.24ರಂದು ನಡೆದ 2024ನೇ ಸಾಲಿನ ದ.ಕ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪುತ್ತೂರು ಮಹಿಳಾ ಠಾಣೆಯ ಎಎಸ್ಐ ರಾಧಾಕೃಷ್ಣ ಜಿ.ಬಿ ಯವರು ಹಲವು ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಕ್ರೀಡಾಕೂಟದಲ್ಲಿ ಗುಂಪು ಆಟಗಳಾದ ವಾಲಿಬಾಲ್, 4*100ರಿಲೇ ಓಟದಲ್ಲಿ ಪ್ರಥಮ ಸ್ಥಾನ, ಕಬಡ್ಡಿಯಲ್ಲಿ ದ್ವಿತೀಯ, ವೈಯಕ್ತಿಕ ಆಟಗಳಾದ ಉದ್ದಜಿಗಿತ, 100 ಮೀ. ಹಾಗೂ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ವಿಶೇಷವಾಗಿ 2024ರ ಪೊಲೀಸ್ ಕ್ರೀಡಾಕೂಟದಲ್ಲಿ ಅತೀ ವೇಗದ ಓಟಗಾರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಪಶ್ಚಿಮ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್.ರವರು ಬಹುಮಾನ ವಿತರಿಸಿದರು.
