ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ಹಿಂದೂ ಉತ್ತರಾಧಿಕಾರ ಕಾನೂನು’ ಕುರಿತು ವಿಶೇಷ ಉಪನ್ಯಾಸ

0

ಭಾರತದಲ್ಲಿರುವ ‘ಹಿಂದೂ ಉತ್ತರಾಧಿಕಾರ ಕಾನೂನು’ ವಿಶಿಷ್ಟವಾಗಿದೆ: ರವಿಕುಮಾರ್ ಎಚ್. ಆರ್.

ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಹಾಸನದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವಿಕುಮಾರ್ ಎಚ್. ಆರ್. ಆಗಮಿಸಿ, ‘ಹಿಂದೂ ಉತ್ತರಾಧಿಕಾರ ಕಾನೂನು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭಾರತದಲ್ಲಿರುವ ಅತ್ಯಂತ ಪ್ರಮುಖ ಕಾನೂನುಗಳ ಅರಿವು ಕಾನೂನು ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಕಾನೂನು ಕ್ಷೇತ್ರ ತುಂಬಾ ವಿಶಾಲವಾಗಿದ್ದು, ಇದರಲ್ಲಿ ‘ಹಿಂದೂ ಉತ್ತರಾಧಿಕಾರ ಕಾನೂನು’ ಒಂದು ವಿಶಿಷ್ಟ ರೂಪದಲ್ಲಿದೆ ಎಂದು ತಿಳಿಸಿದ ಅವರು ನಂತರ ‘ಹಿಂದೂ ಉತ್ತರಾಧಿಕಾರ ಕಾನೂನು’ಯ ಇತಿಹಾಸ ಹಾಗೂ ಇಂದಿನ ಕಾಲಘಟ್ಟದಲ್ಲಿ ಈ ಕಾಯ್ದೆ ಯಾವ ರೀತಿ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ ಎಂಬುದನ್ನು ಹಲವಾರು ಉದಾಹರಣೆಯೊಂದಿಗೆ ಅವರು ವಿವರಿಸಿದರು. ವಿಶೇಷವಾಗಿ ‘ಹಿಂದೂ ಉತ್ತರಾಧಿಕಾರ ಕಾನೂನು’ಯ ಮಹತ್ವ ಹಾಗೂ ಅದು ಯಾವ ರೀತಿ ಸಮಾಜದಲ್ಲಿ ಆಳವಾಗಿ ಬೇರೂರಿದೆ ಎಂಬುದನ್ನು ಹಲವಾರು ಪ್ರಕರಣಗಳನ್ನು ಉಲ್ಲೇಖಸಿ ವಿವರಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಹಾಗೂ ಉಪನ್ಯಾಸಕರೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ರೈ ಪಡ್ಡಂಬೈಲ್ ವಹಿಸಿದ್ದರು. ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರೇಖಾ ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಜ್ಯೋತಿಕಾಲಕ್ಷ್ಮೀ ಎಂ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸ್ಫೂರ್ತಿ ಪಿ. ಇ. ಸ್ವಾಗತಿಸಿ, ವಿದ್ಯಾರ್ಥಿ ವೈಷ್ಣವಿ ಎ. ವಂದಿಸಿದರು.

LEAVE A REPLY

Please enter your comment!
Please enter your name here