ಪುತ್ತೂರು: ಜ.5ರಿಂದ ನಡೆಯಲಿರುವ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಾಮಮತ್ರ ಸಲ್ಲಿಕೆಯ ಅವಧಿ ಮುಕ್ತಾಯವಾಗಿದ್ದು, ಒಟ್ಟು 12 ಸ್ಥಾನಗಳಿಗೆ 48 ಅಭ್ಯರ್ಥಿಗಳು ನಾಮಮತ್ರ ಸಲ್ಲಿಸಿದ್ದಾರೆ.
ಡಿ.29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ.30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ಸಾಮಾನ್ಯ ಸ್ಥಾನಕ್ಕೆ 25 ನಾಮಪತ್ರ:
ಸಾಲಗಾರ ಕ್ಷೇತ್ರದ 5 ಸಾಮಾನ್ಯ ಸ್ಥಾನಕ್ಕೆ ಒಟ್ಟು 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ಗೋಪಾಲಕೃಷ್ಣ ಪಾಟಾಳಿ ಪಿ, ಸಂಘದ ಸಂಘದ ಹಾಲಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಹಾಲಿ ನಿರ್ದೇಶಕರಾದ ಮಂಜುನಾಥ ರೈ ಸಾಂತ್ಯ, ನಿವೃತ್ತ ಸಿಇಓ ಶಿವರಾಮ ಪಿ, ನವೀನ ಎನ್, ನಹುಷ ಪಿ.ವಿ, ಮಹಾಲಿಂಗೇಶ್ವರ ಭಟ್ ಪಿ, ಅನಂತಕೃಷ್ಣ ನಾಯಕ್ ಎಂ, ಶಿವನಾರಾಯಣ ಪಿ.ಜಿ, ಹರೀಶ ಎಂ, ಮಹೇಶ್ವರ ಪಿ, ಗಿರೀಶ್ ಕುಮಾರ್ ಎಂ, ರಮೇಶ ರೈ ಎ, ಅಬ್ದುಲ್ ರಹಿಮಾನ್, ತೋಟ ಇಸುಬು, ಮೂಸಾನೆ ಎನ್, ಮಹಮ್ಮದ್ ಕುಂಞಿ ಎ, ರಾಮ್‌ಪ್ರಸಾದ್ ಆಳ್ವ ಎಮ್, ಬಾಲಮುರಳಿ ಬಿ, ಚಂದ್ರಶೇಖರ ರಾವ್ ಕೆ, ರವೀಂದ್ರ ಪೂಜಾರಿ, ವಿಕ್ರಂ ರೈ, ಶರತ್ ಕುಮಾರ್ ರೈ, ಅಬ್ದುಲ್ ಖಾದರ್ ಎನ್, ಜಗನ್ನಾಥ ರೈ ಕೆ.ಜಿರವರು ನಾಮಪತ್ರ ಸಲ್ಲಿಸಿದ್ದಾರೆ.
2 ಮಹಿಳಾ ಸ್ಥಾನಕ್ಕೆ 6 ನಾಮಪತ್ರ:
ಸಾಲಗಾರ ಕ್ಷೇತ್ರದ 2 ಮಹಿಳಾ ಮೀಸಲು ಸ್ಥಾನಕ್ಕೆ 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಂಘದ ಹಾಲಿ ನಿರ್ದೇಶಕಿ ಮೋಹನಾಂಗಿ, ತಾರಾ ಎಂ, ಮೀನಾಕ್ಷಿ ಟಿ, ತೇಜಸ್ವಿನಿ ಎಂ, ನವೀನ ಕುಮಾರ್ ಬಿ.ಡಿ, ಶಶಿಕಲಾ ಚೌಟರವರು ನಾಮಪತ್ರ ಸಲ್ಲಿಸಿದ್ದಾರೆ.
1 ಹಿಂದುಳಿದ ವರ್ಗ ಎ ಸ್ಥಾನಕ್ಕೆ 3 ನಾಮಪತ್ರ:
ಸಾಲಗಾರ ಕ್ಷೇತ್ರದ 1 ಹಿಂದುಳಿದ ವರ್ಗ ಸ್ಥಾನಕ್ಕೆ ಒಟ್ಟು 3 ನಾಮಪತ್ರ ಸಲ್ಲಿಕೆಯಾಗಿದೆ. ಸಂಘದ ಹಾಲಿ ಉಪಾಧ್ಯಕ್ಷ ರಮೇಶ್ ಪೂಜಾರಿ, ಚಿದಾನಂದ ಆಚಾರ್ಯ, ಸೂಫಿ ಬಿ.ಹೆಚ್‌ರವರು ನಾಮಪತ್ರ ಸಲ್ಲಿಸಿದ್ದಾರೆ.
1 ಹಿಂದುಳಿದ ವರ್ಗ ಬಿ ಸ್ಥಾನಕ್ಕೆ 4 ನಾಮಪತ್ರ:
ಸಾಲಗಾರರ ಕ್ಷೇತ್ರದ 1 ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಒಟ್ಟು 4 ನಾಮಪತ್ರ ಸಲ್ಲಿಕೆಯಾಗಿದೆ. ಸಂಘದ ಹಾಲಿ ನಿರ್ದೇಶಕ ಲೋಕೇಶ್ ಚಾಕೋಟೆ, ಕುಶಾಲಪ್ಪ ಗೌಡ ಮಡ್ಯಲಮಜಲು, ಕುಶಾಲಪ್ಪ ಗೌಡ ಬದಿಯಡ್ಕ, ದಿವ್ಯನಾಥ ಶೆಟ್ಟಿ ಕಾವುರವರು ನಾಮಪತ್ರ ಸಲ್ಲಿಸಿದ್ದಾರೆ.
1 ಪರಿಶಿಷ್ಟ ಪಂಗಡ ಸ್ಥಾನಕ್ಕೆ 3 ನಾಮಪತ್ರ:
ಸಾಲಗಾರ ಕ್ಷೇತ್ರದ 1 ಪರಿಶಿಷ್ಟ ಪಂಗಡ ಸ್ಥಾನಕ್ಕೆ ಒಟ್ಟು 3 ನಾಮಪತ್ರ ಸಲ್ಲಿಕೆಯಾಗಿದೆ. ಸಂಘದ ಹಾಲಿ ನಿರ್ದೇಶಕ ರಾಮಣ್ಣ ನಾಯ್ಕ, ನಾರಾಯಣ ನಾಯ್ಕ, ಪದ್ಮನಾಭ ನಾಯ್ಕರವರು ನಾಮಪತ್ರ ಸಲ್ಲಿಸಿದ್ದಾರೆ.
1 ಪರಿಶಿಷ್ಟ ಜಾತಿ ಸ್ಥಾನಕ್ಕೆ 3 ನಾಮಪತ್ರ:
ಸಾಲಗಾರ ಕ್ಷೇತ್ರದ 1 ಪರಿಶಿಷ್ಟ ಜಾತಿ ಸ್ಥಾನಕ್ಕೆ ಒಟ್ಟು 3 ನಾಮಪತ್ರ ಸಲ್ಲಿಕೆಯಾಗಿದೆ. ಸಂಘದ ಹಾಲಿ ನಿರ್ದೇಶಕ ಲೋಹೀತ್ ಅಮ್ಚಿನಡ್ಕ, ಮಲ್ಲ, ಬಾಬು ರವರು ನಾಮಪತ್ರ ಸಲ್ಲಿಸಿದ್ದಾರೆ.
ಸಾಲಗಾರರಲ್ಲದ 1 ಸ್ಥಾನಕ್ಕೆ 4 ನಾಮಪತ್ರ
ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ 4 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪ್ರಪುಲ್ಲಾ ಆರ್ ರೈ, ನಾರಾಯಣಶರ್ಮ ಪಿ.ಎಸ್, ರಾಜೇಂದ್ರಪ್ರಸಾದ್ ರೈ, ರಾಜೇಶ ಬಿ.ರವರು ನಾಮಪತ್ರ ಸಲ್ಲಿಸಿದ್ದಾರೆ.