ಪುಣಚ ದಲ್ಕಾಜೆಗುತ್ತು ಜಠಾಧಾರಿ, ಮಲರಾಯ, ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ -ಧರ್ಮ ದೈವದ ಉತ್ಸವ

0

ಪುಣಚ: ಪುಣಚ ದಲ್ಕಾಜೆಗುತ್ತು ಶ್ರೀ ಜಠಾಧಾರಿ, ಮಲರಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಡಿ.28 ರಿಂದ ಡಿ‌.30ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು ಡಿ.29ರಂದು ಬೆಳಿಗ್ಗೆ ಕುಟುಂಬದ ಧರ್ಮದೈವ ಶ್ರೀ ಮಲರಾಯ ದೈವದ ನರ್ತನಾದಿ ಉತ್ಸವ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಸಮಾರಾಧನೆ ನಡೆಯಿತು. ದಲ್ಕಾಜೆಗುತ್ತು ಕುಟುಂಬಸ್ಥರು, ಬಂಧುಗಳು, ಮಿತ್ರರು, ಅತಿಥಿಗಳು,‌ ಗಣ್ಯರು, ಗ್ರಾಮಸ್ಥರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಸಾಯಂಕಾಲ ಪೊಟ್ಟ ಪಂಜುರ್ಲಿ ನೇಮ, ಅಂಗಾರಕ್ಕುಡ ನೇಮ, ಸತ್ಯ ದೇವತೆ ನೇಮ, ರಾತ್ರಿ ಉಟೋಪಚಾರ ನಡೆದು ಬಳಿಕ ಪಂಜುರ್ಲಿ ದೈವದ ನೇಮ ಹಾಗೂ ಉಪ ದೈವಗಳ ನೇಮೊತ್ಸವ ಸೂರ್ಯೋದಯದ ತನಕ ನಡೆಯಲಿದೆ.

LEAVE A REPLY

Please enter your comment!
Please enter your name here