ಸಂಜಯನಗರ:ಅನುಭವವೇ ಕಲಿಕೆಯ ಬುನಾದಿ ಎಂದು ಪುತ್ತೂರು ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ರಾಮಚಂದ್ರ ಹೇಳಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಜಯನಗರ ಇಲ್ಲಿ ನಡೆದ 2024_ 25ನೇ ಸಾಲಿನ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಇಲಾಖೆಯು ಮಕ್ಕಳಲ್ಲಿ ಅನುಭವಜನ್ಯ ಕಲಿಕೆಯನ್ನು ಉಂಟುಮಾಡಲು ರೂಪಿಸಿದ ಒಂದು ಚಟುವಟಿಕೆಯೇ ಮೆಟ್ರಿಕ್ ಮೇಳ. ಮಕ್ಕಳಲ್ಲಿ ಉದ್ದಳತೆ, ತೂಕ, ಗಾತ್ರ, ಮತ್ತು ಹಣದ ಲೆಕ್ಕಾಚಾರ ಇತ್ಯಾದಿಗಳನ್ನು ಅನುಭವದ ಮೂಲಕ ಕಲಿಯುವ ವಿಶಿಷ್ಟ ಚಟುವಟಿಕೆ ಇದಾಗಿದ್ದು ಮಕ್ಕಳು ತಾವೇ ವ್ಯಾಪಾರವ ನಡೆಸಿ ಈ ಪರಿಕಲ್ಪನೆಯನ್ನು ಪಡೆಯುವ ವಿಶಿಷ್ಟ ಬೋಧನಾ ವಿಧಾನವಾಗಿದೆ ಸಂಜಯನಗರ ಶಾಲೆ ಈ ಮೆಟ್ರಿಕ್ ಮೇಳವನ್ನು ಸಮರ್ಪಕವಾಗಿ ಸಮರ್ಪಕವಾಗಿ ಸಂಯೋಜಿಸಿದೆ ಎಂದರು.
ಅತಿಥಿಗಳಾಗಿ ಭಾಗವಹಿಸಿದ ಸರಕಾರಿ ಪ್ರೌಢಶಾಲೆ ಸವಣೂರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಮಾಮಚ್ಚನ್ ಮಾತನಾಡಿ ಕಲಿಕೆ ಎನ್ನುವುದು ಬರಿಯ ಕಂಠಪಾಠದ ವ್ಯವಸ್ಥೆಯಾಗಿರದೇ ಮಕ್ಕಳು ಅನುಭವಗಳಿಸಿಕೊಳ್ಳುವುದೇ ಆಗಿದೆ. ಇಂತಹ ಮೆಟ್ರಿಕ್ ಮೇಳಗಳು ಈ ರೀತಿಯ ಕಲಿಕೆಗೆ ದಾರಿ ಎಂದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ವಿಶಿಷ್ಟ ರೀತಿಯ ಸಮವಸ್ತ್ರವನ್ನು ನೀಡಿದ ಸವಣೂರು ಸರಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಡಾ.ಪವಿತ್ರ ರೂಪೇಶ್ ಇವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿದ ಅವರು ಮಕ್ಕಳ ಸ್ವ ಕಲಿಕೆಗೆ ಅವಕಾಶ ನೀಡುವುದು ಪ್ರತಿಯೊಬ್ಬ ಶಿಕ್ಷಕನು ಮಾಡಬೇಕಾದ ಮೊದಲ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಲೆ ಎಲ್ಲಾ ಮಕ್ಕಳು ಬೇರೆ ಬೇರೆ ರೀತಿಯ ವ್ಯಾಪಾರ ಮಳಿಗೆಗಳನ್ನು ಹಾಕಿ ವ್ಯಾಪಾರ ನಡೆಸಿದರು. ಮನೆಯಲ್ಲಿ ಬೆಳೆಸಿದ ತರಕಾರಿಗಳು, ಮನೆಯಲ್ಲಿ ತಯಾರಿಸಿದ ಹಿಡಿಸೂಡಿ, ಚರಂಬುರಿ, ಪಾನೀಯ ತಿಂಡಿ ತಿನಿಸುಗಳು, ಬಟ್ಟೆ, ಫ್ಯಾನ್ಸಿ ವಸ್ತುಗಳು, ಸೊಪ್ಪು ತರಕಾರಿಗಳು ಮುಂತಾದುಗಳನ್ನು ಮಕ್ಕಳು ವ್ಯಾಪಾರ ನಡೆಸಿದರು ರಿಂಗಿನಾಟ ತೂಕ ನೋಡುವುದು ಎತ್ತರ ನೋಡುವುದು ನೀರಿಗೆ ನಾಣ್ಯ ಹಾಕುವುದು ಇತ್ಯಾದಿ ಆಟಗಳು ಕೂಡ ಮಕ್ಕಳ ಗಮನ ಸೆಳೆದವು
ಶಾಲಾ ಪ್ರಭಾರ ಮುಖ್ಯ ಗುರುಗಳಾದ ಸ್ಮಿತಾ ಶ್ರೀ ಬಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಅತಿಥಿ ಶಿಕ್ಷಕರಾದ ಸೌಮ್ಯ, ಗೌರವ ಶಿಕ್ಷಕಿಯಾದ ಪ್ರೀತಿ ಕುಮಾರಿ ಸಹಕರಿಸಿದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಚೈತ್ರ ಮನೋಜ್ ಕುಮಾರ್, ಸದಸ್ಯರಾದ ರಾಜೇಶ್ ಆಚಾರ್ಯ, ಜ್ಯೋತಿ ರಾಜೇಶ್ ಆಚಾರ್ಯ, ಸಾವಿತ್ರಿ, ಮಮತಾ ಹರೀಶ್, ಸುಮತಿ ಪಳಿಕೆ, ನಸೀಮಾ , ಅನಿಶಾ, ರಜಿಯಾ ಹಾಗೂ ಶಾಲಾ ಮುಖ್ಯ ಗುರುಗಳಾದ ರಮೇಶ್ ಉಳಯ ಹಾಗೂ ಹಲವಾರು ಊರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.