ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಮಗು ಮೃತಪಟ್ಟ ದಾರುಣ ಘಟನೆ ನೆ.ಮುಡ್ನೂರು ಗ್ರಾಮದ ಗಾಳಿಮುಖ ಗೋಳಿತ್ತಡಿ ಎಂಬಲ್ಲಿ ಡಿ. 29ರಂದು ಸಂಜೆ ನಡೆದಿದೆ.
ಗೋಳಿತ್ತಡಿ ನಿವಾಸಿ ಸಿಂಸಾರ್ ಎಂಬವರ ಮೂರುವರೆ ವರ್ಷದ ಪುತ್ರ ಝೈನ್ ಮೃತ ಮಗು.
ಮಗು ಆಟವಾಡುತ್ತಾ ಮನೆಯ ಅರ್ಥ್ ಗೆ ಸಂಬಂಧಿಸಿದ ತಂತಿಯನ್ನು ಮುಟ್ಟಿದ್ದು ಈ ವೇಳೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದೆ. ಮಗುವನ್ನು ರಕ್ಷಿಸಲು ಬಂದ ಮಗುವಿನ ಅಜ್ಜ ಶಾಫಿ ಅವರಿಗೆ ವಿದ್ಯುತ್ ಶಾಕ್ ಹೊಡೆದು ಗಂಭೀರ ಸ್ಥಿತಿಯಲ್ಲಿ ಚೆರ್ಕಳದ ಆಸ್ಪತ್ರೆಗೆ ದಾಖಲಾಗಿದ್ದಾರೆ.