ಪುತ್ತೂರು: ಪುತ್ತೂರು ಪೇಟೆಯ ಹೂವಿನ ಮಾರ್ಕೆಟ್ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆಯಲ್ಲಿ ಇರುವ ಪೈಪ್ ನೊಳಗಡೆ ಮಹಿಳೆಯೋರ್ವರ ಕಾಲು ಸಿಲುಕಿ ತೊಂದರೆಗೊಳಗಾದ ಘಟನೆ ಘಟನೆ ಡಿ.30ರಂದು ನಡೆದಿದೆ. ಸ್ಥಳೀಯರು ತಕ್ಷಣವೇ ಮಹಿಳೆಯ ಸಹಾಯಕ್ಕೆ ಧಾವಿಸಿ ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್ ಲೈನ್ ಹಾಕಲಾಗಿದೆ. ಈ ಪೈಪ್ ಲೈನ್ ತುಂಡಾಗಿದ್ದು,ಇದರ ಕುರಿತಾಗಿ ಸಂಬಂಧಪಟ್ಟವರಿಗೆ ಅರಿವಿದ್ದರೂ ಅವರ ಮೌನ ಜಾನತಣದಿಂದಲೇ ಈ ಪರಿಸ್ಥಿತಿಗೆ ಕಾರಣ ಎಂದು ಅಲ್ಲಿದ್ದ ಸಾರ್ವಜನಿಕರ ಮಾತಾಗಿದೆ.