ಪುತ್ತೂರು: ಪುತ್ತೂರು ಮಾಯ್ ದೆ ದೇವುಸ್ ಚರ್ಚ್ನಲ್ಲಿ ಮರಿಯ ದೇವ ಮಾತೆಯ ಹಬ್ಬ ಹಾಗೂ 2025ರ ಹೊಸ ವರುಷದ ಆಚರಣೆ ಡಿ.31ರಂದು ಸಂಜೆ ನಡೆಯಿತು. ವಂ.ರಾಹುಲ್ ಡೆಕ್ಸ್ಟರ್ ಡಿಸೋಜರವರು ಸಂಜೆ 7ರಿಂದ 8ರವರೆಗೆ ಪರಮ ಪವಿತ್ರ ಸಂಸ್ಕಾರದ ಆರಾಧನೆ ನಡೆಸಿದರು ಬಳಿಕ ಪ್ರವಚನ ನೀಡಿದರು. ರಾತ್ರಿ 8ರಿಂದ ಪವಿತ್ರ ಬಲಿ ಪೂಜೆ ಅರ್ಪಿಸಲಾಯಿತು. ವಂ.ಮ್ಯಾಕ್ಸಿಂ ಡಿಸೋಜ ಪ್ರಧಾನ ಗುರುಗಳಾಗಿ ಬಲಿಪೂಜೆ ಅರ್ಪಿಸಿದರು.
ಮಾಯ್ ದೆ ದೇವುಸ್ ಚರ್ಚ್ನ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನಸ್, ಸಹಾಯಕ ಧರ್ಮಗುರು ವಂ.ಲೋಹಿತ್ ಅಜೇಯ್ ಮಸ್ಕರೇನಸ್, ವಂ.ಆಶೋಕ್ ರಾಯನ್ ಕ್ರಾಸ್ತಾ, ವಂ.ರೂಪೇಶ್ ರವೀನ್ ತಾವ್ರೊ ಪೂಜೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನೂರಾರು ಕ್ರೈಸ್ತ ಭಕ್ತಾದಿಗಳು ಭಾಗವಹಿಸಿ ಪ್ರಾರ್ಥಿಸಿದರು.