ಡಾ.ಹಾಜಿ ಯಸ್ ಅಬೂಬಕ್ಕರ್ ಆರ್ಲಪದವು ರವರಿಗೆ ರಾಷ್ಟ್ರಮಟ್ಟದ ಭಾರತ ಸೇವಾ ರತ್ನ 2024 ಪ್ರಶಸ್ತಿ

0

ಪುತ್ತೂರು: ಅಕ್ಷಯ ಪ್ರಾರ್ಥನಾ ಫೌಂಡೇಶನ್ ಹೈದರಾಬಾದ್ ಇದರ ವತಿಯಿಂದ ಸಾಮಾಜಿಕ ಶೈಕ್ಷಣಿಕ ಕಲೆ ಸಾಹಿತ್ಯ ಸಾಂಸ್ಕೃತಿಕ ಮಾಧ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ನೀಡಲ್ಪಡುವ ರಾಷ್ಟ್ರಮಟ್ಟದ ಭಾರತ ಸೇವಾ ರತ್ನ 2024 ಪ್ರಶಸ್ತಿಗೆ ಡಾ. ಹಾಜಿ. ಎಸ್. ಅಬೂಬಕರ್ ಅರ್ಲಪದವು ಭಾಜನರಾಗಿರುತ್ತಾರೆ.


ಡಿ.29ರಂದು ಬೆಂಗಳೂರು ಗಾಂಧಿಭವನದಲ್ಲಿ ಇರುವ ಬಾಪು ಸಭಾಂಗಣದಲ್ಲಿ ಶ್ರೀ ವಾಲ್ಮೀಕಿ ಬ್ರಹ್ಮಾನಂದ ಸ್ವಾಮೀಜಿಯವರ ಅಧ್ಯಕ್ಷತೆ ಮತ್ತು ಸಾನಿಧ್ಯದಲ್ಲಿ ಶಿಕ್ಷಣ ಇಲಾಖೆಯ ಪತ್ರಾಂಕಿತ ಗೆಜೆಟೆಡ್ ಮ್ಯಾನೇಜರ್ ಬಿ ಮೋಹನ್ ಕಿಶೋರ್ ಇವರು ಭಾರತ ಸೇವಾ ರತ್ನ 2024 ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗಡಿನಾಡ ಸಾಧಕ ಡಾ. ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಡಾ.ರಾಮಭದ್ರಯ್ಯ ಮಹಿಳಾ ಹೋರಾಟ ಗಾರ್ತಿ ಶಶಿಕಲಾ ಜಗದೀಶ ಹಾಸನ ಮುಖ್ಯ ಶಿಕ್ಷಕಿ ಡಾ. ಶಶಿಕಲಾ ದೊಡ್ಡ ಬಳ್ಳಾಪುರ, ಶಿಕ್ಷಣ ಇಲಾಖೆಯ ಚೆಲುವರಾಯ ಶಂಕ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. ಶಿಕಾರಿಪುರದ ಶಿಕ್ಷಕರಾದ ಲೋಕೇಶ್ ಮಕ್ರಿ ಡಾ. ಅಶೋಕ್ ಬಾಬು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here