ನೆಲ್ಯಾಡಿ: 4 ಲಕ್ಷ ರೂ.ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ನೆಲ್ಯಾಡಿ ಗ್ರಾಮ ಪಂಚಾಯತ್‌ನ 2ನೇ ವಾರ್ಡ್‌ನ ಪಟ್ಟೆಜಾಲು-ಪಡ್ಪಗುಡ್ಡೆ ರಸ್ತೆಯ ಉದ್ಘಾಟನೆ ನಡೆಯಿತು.
ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್, ಉಪಾಧ್ಯಕ್ಷೆ ರೇಶ್ಮಾ ಶಶಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು, 2ನೇ ವಾರ್ಡ್‌ನ ಪಟ್ಟೆಜಾಲು-ಪಡ್ಪಗುಡ್ಡೆ ರಸ್ತೆ ಕಾಂಕ್ರಿಟೀಕರಣಗೊಳಿಸುವಂತೆ ಈ ಭಾಗದ ಗ್ರಾಮಸ್ಥರು ಬಹಳ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇದೀಗ ಗ್ರಾ.ಪಂ. ಉಪಾಧ್ಯಕ್ಷೆ ರೇಶ್ಮಾ ಶಶಿ ಹಾಗೂ ವಾರ್ಡ್‌ನ ಸದಸ್ಯ ಮಹಮ್ಮದ್ ಇಕ್ಬಾಲ್ ರವರ ಪ್ರಯತ್ನದಿಂದ ಅನುದಾನ ಮಂಜೂರುಗೊಳಿಸಿ ಕಾಮಗಾರಿ ನಡೆದಿದೆ ಎಂದರು.
ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜ್ ಮಾತನಾಡಿ, ಯಾವುದೇ ಕಾಮಗಾರಿ ಕೈಗೆತ್ತಿಕೊಂಡಾಗ ಊರಿನ ಜನರ ಸಹಕಾರ ದೊರೆತಲ್ಲಿ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಸಾಧ್ಯವಿದೆ. ಈ ಕಾಮಗಾರಿಗೂ ಇಲ್ಲಿನ ಜನರ ಸಹಕಾರ ದೊರೆತಿದೆ. ಕಾಮಗಾರಿಯೂ ಉತ್ತಮ ರೀತಿಯಲ್ಲಿ ನಡೆದಿದೆ ಎಂದು ಹೇಳಿದರು.
ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಧರ್ಣಪ್ಪ ಹೆಗ್ಡೆ ಮಾತನಾಡಿ, ಸದಸ್ಯ ಮಹಮ್ಮದ್ ಇಕ್ಬಾಲ್ ರವರು ತಮ್ಮ 5 ವರ್ಷದ ಅವಧಿಯನ್ನು ಪರಿಪೂರ್ಣವಾಗಿ ಊರಿನ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದಾರೆ. ಇನ್ನು ಮುಂದೆಯೂ ಅವರ ಸೇವೆ ಹೀಗೆ ಮುಂದುವರಿಯಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಮಹಮ್ಮದ್ ಇಕ್ಬಾಲ್ ರವರನ್ನು ಅವರ ಸಮಾಜ ಸೇವೆಗಾಗಿ ಸನ್ಮಾನಿಸಲಾಯಿತು. ಗ್ರಾ.ಪಂ.ಕಾರ್ಯದರ್ಶಿ ಅಂಗು, ಗುತ್ತಿಗೆದಾರ ಶಿವಪ್ರಸಾದ್, ಹಿರಿಯರಾದ ಜೋಸೆಫ್ ಡಿ’ಸೋಜಾ ಪಡ್ಪಗುಡ್ಡೆ, ಆನಂದ ಹೆಗ್ಡೆ, ಧರ್ಣಪ್ಪ ಹೆಗ್ಡೆ, ಡೆನಿಸ್ ಡಿ’ಸೋಜಾ, ದೇವಕಿ, ನಾರಾಯಣ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಸಂಪಾವತಿ ಕಾರ್ಯಕ್ರಮ ನಿರೂಪಿಸಿದರು.