ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ದೇಶಕರಾಗಿದ್ದ ಸವಣೂರು ಗ್ರಾಮದ ಮುಗೇರು ನಿವಾಸಿ ಸಂತೋಷ್ ಕುಮಾರ್ ರೈ( 40 ವ) ರವರು ಜ.2 ರಂದು ಬೆಳಿಗ್ಗೆ ವಿಜಯಪುರದಲ್ಲಿ ಹೃದಯಾಘಾತದಿಂದಾಗಿ ನಿಧನರಾದರು.
ಸಂತೋಷ್ ಕುಮಾರ್ ರೈ ಸವಣೂರು ರವರು 2001ರಲ್ಲಿ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸೇವಾನಿರತರಾಗಿ ಉದ್ಯೋಗಕ್ಕೆ ಸೇರಿ, ಆ ಬಳಿಕ ಕಬಕದಲ್ಲಿ ಸೇವಾನಿರತರಾಗಿದ್ದರು. ಬಳಿಕ ಮೇಲ್ವಿಚಾರಕರಾಗಿ ಭಡ್ತಿಗೊಂಡು, ಆ ಬಳಿಕ ಸುಳ್ಯ ತಾಲೂಕು ಯೋಜನಾಧಿಕಾರಿಯಾಗಿದ್ದರು. ಬಳಿಕ ಬೆಳಗಾವಿಯ ರಾಯಭಾಗದಲ್ಲಿ ಕರ್ತವ್ಯ ನಿರ್ವಹಿಸಿ, ಕಳೆದ 2 ವರುಷಗಳಿಂದ ವಿಜಯಪುರ ಜಿಲ್ಲಾ ನಿರ್ದೇಶಕರಾಗಿದ್ದರು.