ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿಯ ವಿದ್ಯಾರ್ಥಿಗಳು ಚಿತ್ರದುರ್ಗದ ಪುಟಾಣಿ ವಿಜ್ಞಾನ ಸಂಸ್ಥೆ ಸಂಘಟಿಸಿರುವ ಅಂತರಾಷ್ಟ್ರೀಯ ಮಟ್ಟದ ಸೈನ್ಸ್ ಟ್ಯಾಲೆಂಟ್ ಪರೀಕ್ಷೆಯಲ್ಲಿ ಒಂಭತ್ತನೇ ತರಗತಿಯ ಹೇಮಂತ್ ಆರ್ ನಾಯಕ್ ರಾಜ್ಯ ಮಟ್ಟದಲ್ಲಿ ಪ್ರಥಮ ಎಂಟನೇ ತರಗತಿಯ ಫಾತಿಮತ್ ರಫೀಲಾ,ಏಳನೇ ತರಗತಿಯ ಅನಿಷಾ ಫಾತಿಮಾ ಜಿಲ್ಲಾ ಮಟ್ಟದಲ್ಲಿ ಪ್ರಥಮ ಐದನೇ ತರಗತಿಯ ಸಝಾ ಫಾತಿಮಾ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಭಾಗವಹಿಸಿದ ಇತರ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಪಡೆದಿದ್ದಾರೆ. ಬುರೂಜ್ ಶಾಲೆ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಉತ್ತಮ ಮುಖ್ಯ ಶಿಕ್ಷಕಿ ಮತ್ತು ಉತ್ತಮ ಸಂಘಟಕ ಪ್ರಶಸ್ತಿಯು ಲಭಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕ ವೃಂದ ಆಡಳಿತ ಮಂಡಳಿ,ಪೋಷಕರು ಶ್ಲಾಘಿಸಿದ್ದಾರೆ.