ಮಾನವೀಯತೆ ಮೆರೆದ ಆಲಂಕಾರು ದುರ್ಗಾಂಬಾ ಕಾಲೇಜು ವಿದ್ಯಾರ್ಥಿನಿ

0

ಆಲಂಕಾರು:ಆಲಂಕಾರಿನ ದುರ್ಗಾಂಬಾ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿನಿ ಉಮಾ ಎಂಬವರು ತನಗೆ ಸಿಕ್ಕಿದ ಬಂಗಾರದ ಚೈನನ್ನು ಕಳೆದುಕೊಂಡ ವ್ಯಕ್ತಿಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ.


ಕುಂತೂರು ಪದವು ನಿವಾಸಿ ರಾಜು ಪಿ ಜಿ ಎಂಬವರ ಮಗಳ ಚಿನ್ನದ ಸರ ಕುಂತೂರು ಬಸ್ ಸ್ಟಾಂಡ್ ನ ಹತ್ತಿರ ಬಿದ್ದು ಕಳೆದುಹೋಗಿತ್ತು.ಬಳಿಕ ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಮಾ ಅವರಿಗೆ ಸಿಕ್ಕಿದ್ದು ತದನಂತರ ವಾಟ್ಸಪ್ ನ ಮೂಲಕ ಸಂದೇಶ ರಚಿಸಿ ರವಾನಿಸಿದ ಬಳಿಕ ಚಿನ್ನದ ಸರ ಕಳಕೊಂಡ ವ್ಯಕ್ತಿಯು ವಾಟ್ಸಪ್ ಸಂದೇಶವನ್ನು ಗಮನಿಸಿ, ಚಿನ್ನದ ಸರದ ಗುರುತನ್ನು ಉಮಾ ಅವರಿಗೆ ತಿಳಿಸಿ ಆ ಚಿನ್ನದ ಸರ ತನ್ನದು ಎಂದು ತಿಳಿಸಿದ್ದಾರೆ.ಬಳಿಕ ಚಿನ್ನದ ವಾರಿಸುದಾರರ ಮನೆಗೆ ಸ್ವತಃ ವಿರ್ದಾಥಿನಿಯೇ ತೆರಳಿ ಸರವನ್ನು ಮರಳಿಸಿ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here