ಪುತ್ತೂರು: ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘ ಪುತ್ತೂರು, ಇದರ 25ನೇ ವರ್ಷದ ನೂತನ ಪದಾಧಿಕಾರಿಗಳ ತಂಡ ಮೊದಲನೇ ಕಾರ್ಯಕ್ರಮವಾಗಿ ಬಿರುಮಲೆಗುಡ್ಡೆಯಲ್ಲಿರುವ ಪ್ರಜ್ಞಾಶ್ರಮಕ್ಕೆ ಭೇಟಿ ನೀಡಿ ಬೆಳಗ್ಗಿನ ಫಲಹಾರ ನೀಡಿ ನೂತನ ಅಧ್ಯಕ್ಷರ ಹುಟ್ಟುಹಬ್ಬ ಆಚರಿಸಿದರು.
ಗೌರವಾಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ, ಕಾನೂನು ಸಲಹೆಗಾರರಾದ ಹರಿಣಾಕ್ಷಿ ಜೆ. ಶೆಟ್ಟಿ, ಸಂಚಾಲಕ ಅರವಿಂದ್ ಪೆರಿಗೇರಿ ಮತ್ತು ಇಸ್ಮಾಯಿಲ್ ಬೊಳುವಾರು, ಅಧ್ಯಕ್ಷ ತಾರಾನಾಥ ಗೌಡ ಬನ್ನೂರು, ಉಪಾಧ್ಯಕ್ಷ ಶಶಿಧರ ಸಿಟಿಗುಡ್ಡೆ, ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಜೊತೆ ಕಾರ್ಯದರ್ಶಿ ನವೀನ್ ಪಡಿಲ್, ಖಜಾಂಜಿ ಸಿಲ್ವೆಸ್ಟಾರ್ ಡಿಸೋಜ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಕರ್ಮಲ ಹಾಗೂ ಸದಸ್ಯ ಹರೀಶ್ ಸಂಟ್ಯಾರ್ ಉಪಸ್ಥಿತರಿದ್ದರು.