ಪುತ್ತೂರು:ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ತಾಲೂಕು ಶಾಖೆಯ ನೇತೃತ್ವದಲ್ಲಿ ನೂತನವಾಗಿ ಪ್ರಾರಂಭಿಸಲಾದ ‘ಪುತ್ತೂರು ತಾಲೂಕು ಸರಕಾರಿ ನೌಕರರ ಸಹಕಾರಿ ಸಂಘ’ ಇದರ ಉದ್ಘಾಟನೆ ಹಾಗೂ ಸರಕಾರಿ ನೌಕರರ ಸಂಘದ 2024-29ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.4ರಂದು ಮಿನಿ ವಿಧಾನ ಸೌಧದ ಬಳಿಯ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ನಡೆಯಿತು.
ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ-ಸೀತಾರಾಮ ರೈ ಸವಣೂರು:
ನೂತನ ಸಹಕಾರಿ ಸಂಘದ ಕಛೇರಿಯನ್ನು ಉದ್ಘಾಟಿಸಿದ ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ,ಆದರ್ಶ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರೂ ಆಗಿರುವ ‘ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಬಹಳಷ್ಟು ಪ್ರಾಮುಖ್ಯವಾಗಿದೆ.ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಪ್ರಮುಖವಾಗಿದೆ.ಎಸ್ಸಿಡಿಸಿಸಿ ಬ್ಯಾಂಕ್, ಕ್ಯಾಂಪ್ಕೋ, ಕೆಎಂಎಫ್ ಮೂರು ಸಂಸ್ಥೆಗಳು ರೈತರ ಒಡನಾಡಿಯಾಗಿ ಕೆಲಸ ಮಾಡುತ್ತಿವೆ.ಅದರ ಬೆಂಬಲದಿಂದ, ಕೊರೋನಾದಂಥ ಕಷ್ಟದ ಕಾಲದಲ್ಲಿಯೂ ದ.ಕ ಜಿಲ್ಲೆಯಲ್ಲಿ ಒಂದೇ ಒಂದು ಆತ್ಮಹತ್ಯೆಯಾಗಿಲ್ಲ ಎನ್ನುವುದು ಸಂತಸದ ವಿಷಯ ಎಂದರು.ಇಂದು ಸಹಕಾರಿ ಕ್ಷೇತ್ರವು ದೇಶದಾದ್ಯಂತ ವಿಶಾಲವಾಗಿದೆ.ಪ್ರಜಾಪ್ರಭುತ್ವ ಮಾದರಿಯಲ್ಲಿ ಸಹಕಾರಿ ಕ್ಷೇತ್ರವು ರಾಜಕೀಯ ರಹಿತವಾಗಿ ಕೆಲಸ ಮಾಡುತ್ತಿದೆ.ಸಹಕಾರಿ ಸಂಘಗಳು ಶೀಘ್ರದಲ್ಲಿ ಜನರ ಆರ್ಥಿಕ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿದ್ದು ಜನರು ಸಹಕಾರಿ ಕ್ಷೇತ್ರವನ್ನೇ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದ ಸೀತಾರಾಮ ರೈ, ದೇಶದಲ್ಲಿ ಕರ್ನಾಟಕ ರಾಜ್ಯ, ರಾಜ್ಯದಲ್ಲಿ ದ.ಕ ಜಿಲ್ಲೆ ಸಹಕಾರಿ ಕ್ಷೇತ್ರದ ಸಾಧನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.ಸಹಕಾರಿ ಕ್ಷೇತ್ರವನ್ನು ದೇಶವ್ಯಾಪಿಯಾಗಿ ಮಾಡಲು ಕೇಂದ್ರದಲ್ಲಿ ಪತ್ಯೇಕ ಸಹಕಾರಿ ಇಲಾಖೆಯನ್ನೇ ಸ್ಥಾಪಿಸಲಾಗಿದ್ದು ಸಾಕಷ್ಟು ಬದಲಾವಣೆ ಕಂಡಿದೆ ಎಂದು ಹೇಳಿದರು.ಹಲವು ಜಾತಿ, ಕಸುಬುಗಳಿಗೆ ಸಂಬಂಽಸಿ ಸಹಕಾರಿ ಸಂಘಗಳಿರುವಂತೆ ಸರಕಾರಿ ನೌಕರರೂ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಹಕಾರಿಯಗುವಂತೆ ಬೈಲಾದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿ ಸಂಘದ ಬೆಳವಣಿಗೆಗೆ ಶುಭಹಾರೈಸಿದರು.
ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ-ಸುಬ್ಬಯ್ಯ:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ಮಾತನಾಡಿ, ಸಣ್ಣ ಕಟ್ಟಡದಲ್ಲಿದ್ದ ಸರಕಾರಿ ನೌಕರರ ಸಂಘವು ಈಗ ಸುಸಜ್ಜಿತ ಕಟ್ಟಡವನ್ನು ಹೊಂದಿದೆ.ಎಲ್ಲರ ಸಹಕಾರದಲ್ಲಿ ಸಂಘ ಅಭಿವೃದ್ಧಿ ಹೊಂದುತ್ತಾ ಇತರ ಸಂಘಗಳಂತೆ ಸರಕಾರಿ ನೌಕರರಿಗೂ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ.ಇದು ನೌಕರರ ಆಶಯಗಳು, ಬೇಡಿಕೆಗಳನ್ನು ಈಡೇರಿಸಲು ಸಹಕಾರಿಯಾಗಲಿದ್ದು ಈ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ.ಸಹಕಾರಿ ಕ್ಷೇತ್ರದ ತವರೂರಾಗಿರುವ ಪುತ್ತೂರಿನಲ್ಲಿ ಹಲವಾರು ಸಂಘಗಳಿದ್ದು ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದರಲ್ಲದೆ,ನೂತನ ಸಹಕಾರಿ ಸಂಘವು ಜಿಲ್ಲೆಯಲ್ಲಿ ಉತ್ತಮ ಸಂಘವಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.
ನಗುಮೊಗದ ಸೇವೆಯೊಂದಿಗೆ ಜನರಿಗೆ ಸ್ಪಂದನೆ ನೀಡಬೇಕು-ಜಯಂತ ನಡುಬೈಲು:
ಕಂಪ್ಯೂಟರ್ ಉದ್ಘಾಟಿಸಿದ ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಸಹಕಾರಿ ಸಂಘಗಳು ಜನ ಸಾಮಾನ್ಯರಿಗೆ ಕೈಗೆಟಕುವ ಸಂಘವಾಗಿದೆ.ಕಷ್ಟ ಕಾಲದಲ್ಲಿ ಜನರಿಗೆ ನೆರವಿಗೆ ಬರುತ್ತವೆ.ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ಜೊತೆಗೆ ಹಲವು ಮಂದಿಗೆ ಉದ್ಯೋಗವನ್ನು ಪಡೆಯುವಲ್ಲಿಯೂ ಸಹಕಾರಿ ಸಂಘಗಳು ಸಹಕಾರಿಯಾಗಿದೆ.ಸರಕಾರಿ ನೌಕರರ ಒಗ್ಗಟ್ಟಿನಿಂದಾಗಿ 541 ಸದಸ್ಯರಿಂದ ಪಾಲು ಬಂಡವಾಳ ಸಂಗ್ರಹವಾಗಿದೆ.ಠೇವಣಿ ಸಂಗ್ರಹದ ಜೊತೆ ಸಾಲ ವಿತರಣೆ, ಮರುಪಾವತಿಯಾಗಬೇಕು.ನಗುಮೊಗದ ಸೇವೆಯೊಂದಿಗೆ ಜನರಿಗೆ ಸ್ಪಂದನೆ ನೀಡಬೇಕು ಎಂದರು.ಸಂಘವು ಬೆಳೆದು ಹಲವು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಕಠಿಣ ಪರಿಶ್ರಮ, ಪ್ರಾಮಾಣಿಕ ಸೇವೆ ಅವಶ್ಯಕ-ಲೋಕೇಶ್ ಎಸ್.ಆರ್:
ಲಾಂಛನ ಬಿಡುಗಡೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಕರಾವಳಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಪುಲ ಅವಕಾಶವಿದೆ.ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು ಈಗ ಸ್ಪರ್ಧೆಯಿದೆ.ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಕಠಿಣ ಪರಿಶ್ರಮ, ಪ್ರಾಮಾಣಿಕ ಸೇವೆಯ ಅಗತ್ಯವಿದೆ.ಪುತ್ತೂರು ಸರಕಾರಿ ನೌಕರರ ಸಂಘವು ಶಿಸ್ತು ಬದ್ದವಾಗಿ ನಡೆಯುತ್ತಿರುವುದರ ಫಲವಾಗಿ ಸಂಘವು ಯಶಸ್ವಿಯಾಗಿ ಮುನ್ನಡೆದು ಸಹಕಾರ ಸಂಘ ಸ್ಥಾಪನೆಯಾಗಿದೆ ಎಂದರು.
ಸಾಲ ಪಡೆದವರು ಕ್ಲಪ್ತ ಸಮಯದಲ್ಲಿ ಪಾವತಿಸಿದಾಗ ಸಹಕಾರಿ ಸಂಘ ಬೆಳೆಯಲಿದೆ-ಆರ್.ಸಿ.ನಾರಾಯಣ:
ಠೇವಣಿ ಪತ್ರ ಬಿಡುಗಡೆ ಮಾಡಿ, ವಿತರಿಸಿದ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ ಮಾತನಾಡಿ, ಪ್ರಾಥಮಿಕ ಶಿಕ್ಷಣ ನೀಡುವ ಇಲಾಖೆಯಿಂದ ಪಿಂಚಣಿ ನೀಡುವ ತನಕದ ಎಲ್ಲಾ ಇಲಾಖೆಗಳವರು ಈ ಸಹಕಾರಿ ಸಂಘದಲ್ಲಿದ್ದಾರೆ.ಹೀಗಾಗಿ ಪಾಲು ಬಂಡಾವಳ, ಠೇವಣಿಗೆ ಬರವಿಲ್ಲ.ಠೇವಣಿ ಪಡೆದು ಸಾಲ ವಿತರಿಸಿದಾಗ ಸಹಕಾರಿ ಸಂಘ ಬೆಳೆಯಲಿದೆ. ಸಹಕಾರಿ ಸಂಘಕ್ಕೆ ಕಷ್ಟದ ಕಾಲದಲ್ಲಿ ಜನರು ಬರುತ್ತಿದ್ದು ಗೌರವದಿಂದ ಸಾಲ ನೀಡುತ್ತೇವೆ.ಸಾಲ ಪಡೆದುಕೊಂಡವರೂ ಅಷ್ಟೇ ಗೌರವದಿಂದ ಮರುಪಾವತಿಸಿದಾಗ ಸಹಕಾರಿ ಸಂಘಗಳು ಬೆಳೆಯಲಿದೆ.ಸರಕಾರಿ ನೌಕರರು ಸಮುದಾಯದ ಜೊತೆ ಇರುವವರು.ಜನರ ಹತ್ತಾರು ನೋವುಗಳಿಗೆ ಸ್ಪಂದನೆ ನೀಡುವವರಾಗಿದ್ದಾರೆ ಎಂದು ಹೇಳಿ ಸಂಘಕ್ಕೆ ಶುಭಹಾರೈಸಿದರು.
ಸರಕಾರಿ ನೌಕರರೆಲ್ಲರೂ ನಮ್ಮ ಸಂಘದಲ್ಲಿಯೇ ವ್ಯವಹರಿಸಬೇಕು -ಡಾ.ದೀಪಕ್ ರೈ:
ಮುಖ್ಯ ಅತಿಥಿಯಾಗಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ,ಸಂಘ ಹುಟ್ಟು ಹಾಕುವುದು ಸುಲಭ.ಆದರೆ ನಿರ್ವಹಣೆ ಅಷ್ಟೇ ಕಷ್ಟವಿದೆ.ರಾಷ್ಟ್ರೀಕೃತ ಬ್ಯಾಂಕುಗಳ ಮಧ್ಯೆ ಬಹಳಷ್ಟು ಸ್ಪರ್ಧೆಗಳಿದ್ದು ಸರಕಾರಿ ನೌಕರರೆಲ್ಲರೂ ನಮ್ಮ ಸಹಕಾರಿ ಸಂಘದಲ್ಲಿಯೇ ಠೇವಣಿ ಇಟ್ಟು, ಸಾಲ ಪಡೆದು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರಲ್ಲದೆ, ಉತ್ತಮ ಸೇವೆ ನೀಡುವ ಮೂಲಕ ನೂತನ ಸಹಕಾರಿ ಸಂಘ ಅತ್ಯುತ್ತಮ ಸಂಘವಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.
ಸರಕಾರಿ ನೌಕರರ ಕೊರತೆ ನೀಗಿದೆ-ಪುರುಷೋತ್ತಮ:
ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಸಂಘದ ಮುಖ್ಯ ಪ್ರವರ್ತಕ ಪುರುಷೋತ್ತಮ ಬಿ.ಮಾತನಾಡಿ, ಎಲ್ಲರ ಸಹಕಾರದಿಂದ ಸರಕಾರಿ ನೌಕರರ ಸಂಘದ ಸುಸಜ್ಜಿತ ಕಟ್ಟಡ ನಿರ್ಮಾಣ ಅಗಿದೆ.ಸರಕಾರಿ ನೌಕರರಿಗೆ ತಮ್ಮದೇ ಆದ ಸಹಕಾರಿ ಸಂಘದ ಕೊರತೆ ಕಂಡು ಅದನ್ನು ನೀಗಿಸಲು ಸಹಕಾರಿ ಸಂಘ ಸ್ಥಾಪಿಸಲಾಗಿದೆ ಎಂದು ಹೇಳಿ ಸಂಘದ ಪ್ರಗತಿಗೆ ಸಹಕಾರ ಕೋರಿದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಪುತ್ತೂರು ಪ್ರಧಾನ ಶಾಖೆಯ ವ್ಯವಸ್ಥಾಪಕ ಹರೀಶ್ ರೈ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಮೌರೀಸ್ ಮಸ್ಕರೇನ್ಹಸ್ ಹಾಗೂ ಕೃಷ್ಣಪ್ಪ ಕೆ.ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರೀಸ್ ಮಸ್ಕರೇನ್ಹಸ್, ಸಹಕಾರಿ ಸಂಘದ ಸ್ಥಾಪನೆಗೆ ನಾಂದಿ ಹಾಡಿದ್ದ ಕೃಷ್ಣಪ್ಪ ಕೆ., ಮಾಮಚ್ಚನ್, ಸಂಘದ ಮುಖ್ಯ ಪ್ರವರ್ತಕ ಪುರುಷೋತ್ತಮ ಬಿ.,ಸರಕಾರಿ ನೌಕರರ ಸಂಘದ ಚುನಾವಣೆ ನಡೆಸಿಕೊಟ್ಟ ನಿವೃತ್ತ ಉಪ ತಹಶೀಲ್ದಾರ್ ಸೂರಪ್ಪ ಗೌಡ ಹಾಗೂ ಪ್ಯಾಟ್ರಿಕ್ ಲೋಬೋರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ:
೨೦೨೪-೨೦೨೯ನೇ ಸಾಲಿಗೆ ಆಯ್ಕೆಯಾದ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಧ್ಯಕ್ಷ ಶಿವಾನಂದ ಆಚಾರ್ಯ, ಕಾರ್ಯದರ್ಶಿ ಅಬ್ರಹಾಂ ಎಸ್.ಎ.,ಕೋಶಾಧಿಕಾರಿ ಚಂದ್ರ ನಾಯ್ಕ್, ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಅಶ್ರಫ್, ಗೌರವಾಧ್ಯಕ್ಷ ವಿಜಯ ಕುಮಾರ್, ಕಾರ್ಯಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಹಿರಿಯ ಉಪಾಧ್ಯಕ್ಷರಾದ ರವಿಚಂದ್ರ ಯು.,ಪದ್ಮಾವತಿ ಎಂ.ಆರ್., ಉಪಾಧ್ಯಕ್ಷರಾದ ತನುಜಾ, ಕವಿತಾ, ಧರ್ಮಪಾಲ ಕೆ., ಜತೆ ಕಾರ್ಯದರ್ಶಿ ಪ್ರತೀಕ್ ಎನ್.ಎಸ್., ಎಫ್.ಜಿ.ಎಂ ಗೌಡ, ಸುಜಾತ ಎಸ್., ಕ್ರೀಡಾ ಕಾರ್ಯದರ್ಶಿಗಳಾಗಿ ವರುಣ್ ಕುಮಾರ್, ಭರತ್, ಸಂಘಟನಾ ಕಾರ್ಯದರ್ಶಿ ಸುಧಿರ್ ಪಿ., ಸಂದೀಪ್, ಜೂಲಿಯಾನ ಮೊರಾಸ್, ಪ್ರಮೋದ್ ಕುಮಾರ್ ಕೆ., ಜತೆ ಕೋಶಾಧಿಕಾರಿಗಳಾಗಿ ಚಂದ್ರಶೇಖರ ನಾಯ್ಕ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುಲೋಚನಾ ಪಿ.ಕೆ., ಜಗನ್ನಾಥ ಅರಿಯಡ್ಕ, ಆಂತರಿಕ ಲೆಕ್ಕ ಪರಿಶೋಧಕ ಕೃಷ್ಣ ಬಿ., ನಿರ್ದೇಶಕರಾದ ಜಯರಾಜ್ ಕೆ., ಲೀಲಯ್ಯ ಎಂ., ಸುನಿಲ್ ವಿ., ಆಶಾ, ನಾಗೇಶ್ ಎಂ., ಗಣೇಶ್ ಕೆ.ಎಂ., ಸಾವಿತ್ರಿ ಬಿ.ಇವರುಗಳನ್ನು ಅತಿಥಿಗಳು ಹೂ ಹಾಗೂ ಶಾಲು ನೀಡುವ ಮೂಲಕ ಪದಗ್ರಹಣ ನೆರವೇರಿಸಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಸ್ವಾಗತಿಸಿದರು.ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಅಶ್ರಫ್ ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪಾಧ್ಯಕ್ಷೆ ಪದ್ಮಾವತಿ ಎಂ.ಆರ್ ವಂದಿಸಿದರು.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕಿ ವೀಣಾ ಪ್ರಾರ್ಥಿಸಿದರು.ಸಂಘದ ಕಾರ್ಯದರ್ಶಿ ಅಬ್ರಹಾಂ ಎಸ್.ಎ., ಖಜಾಂಚಿ ಚಂದ್ರ ನಾಯ್ಕ್, ನಾಗೇಶ್ ಎಂ., ಸುಲೋಚನಾ ಪಿ.ಕೆ., ಸುಧಿರ್, ಸಹಕಾರ ಸಂಘದ ಪ್ರವರ್ತಕರಾದ ಧರ್ಣಪ್ಪ ಗೌಡ, ಹೊನ್ನಪ್ಪ ಗೌಡ, ತನುಜಾ, ಕವಿತಾ, ಕೃಷ್ಣ ಬಿ., ಚಂದ್ರಶೇಖರ ನಾಯ್ಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.
ಸರಕಾರಿ ನೌಕರರಿಗೊಂದು ಸಹಕಾರ ಸಂಘ ಸ್ಥಾಪಿಸುವ ನಮ್ಮ ಹಲವು ವರ್ಷಗಳ ಕನಸು ನನಸಾಗಿದೆ.ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರುಗಳ ಪರಿಶ್ರಮದ -ಲವಾಗಿ ಸುಸಜ್ಜಿತ ಕಟ್ಟಡ, ಸಭಾಭವನ ನಿರ್ಮಾಣಗೊಂಡಿದೆ.ಸಹಕಾರಿ ಸಂಘ ಸ್ಥಾಪಿಸುವುದು ನಮ್ಮ ಬಹುಮುಖ್ಯ ಆಕಾಂಕ್ಷೆಯಾಗಿತ್ತು.ಹಂತ ಹಂತವಾಗಿ ಹಿರಿಯರ ಮಾರ್ಗದರ್ಶನ ಪಡೆದು ಸಹಕಾರಿ ಸಂಘ ಸ್ಥಾಪನೆಗೊಂಡಿದ್ದು ಸಂಘದಲ್ಲಿ 541 ಸದಸ್ಯರಿಂದ ರೂ.15 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದೆ.ಎಲ್ಲರ ಸಹಕಾರದಿಂದ ಸಹಕಾರಿ ಸಂಘ ಸ್ಥಾಪನೆಯಾಗಿದೆ.ಇದಕ್ಕಾಗಿ ಎಲ್ಲಾ ಇಲಾಖೆಗಳ ಅಽಕಾರಿ, ಸಿಬ್ಬಂದಿಗಳು ಕೈಜೋಡಿಸಿದ್ದಾರೆ-ಶಿವಾನಂದ ಆಚಾರ್ಯ, ಅಧ್ಯಕ್ಷರು, ಸರಕಾರಿ ನೌಕರರ ಸಂಘ
ಸಹಕಾರಿ ತತ್ವದಂತೆ ಎಲ್ಲರ ಸಹಕಾರದಿಂದ ಸಹಕಾರಿ ಸಂಘದ ಸ್ಥಾಪನೆಗೆ ಮುಂದಡಿ ಇಟ್ಟು 2022-23ರಲ್ಲಿ ಅನುಮತಿ ಪಡೆದುಕೊಳ್ಳಲಾಗಿದೆ.ಎಲ್ಲಾ ಇಲಾಖೆಗಳಿಂದಲೂ ಪ್ರವರ್ತಕರನ್ನು ಆಯ್ಕೆ ಮಾಡಿ ಅವರ ಮೂಲಕ ಪಾಲು ಬಂಡವಾಳ ಸಂಗ್ರಹವಾಗಿದೆ.ಪಾಲು ಬಂಡವಾಳ ಸಂಗ್ರಹಣೆಗೆ ಸಹಕಾರಿ ಇಲಾಖೆ ನಿಗದಿಪಡಿಸಿದ ಗುರಿಗಿಂತ ಅಧಿಕವಾಗಿ 541 ಸದಸ್ಯರಿಂದ ರೂ.15 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದೆ.ನಿಽಷ್ಠ ಠೇವಣಿಯೂ ಸಂಗ್ರಹವಾಗಿದೆ.ಸಹಕಾರ ಇಲಾಖೆ ನಿಯಮ, ಬೈಲಾದಂತೆ ಸಂಘದ ವ್ಯವಹಾರ ನಡೆಯಲಿದೆ.ಎಲ್ಲಾ ಸರಕಾರಿ ನೌಕರರು ಸಂಘದ ಮುಖಾಂತರ ವ್ಯವಹಾರ ಮಾಡಿ ಸಹಕರಿಸಬೇಕು
-ಪುರುಷೋತ್ತಮ ಬಿ., ಮುಖ್ಯ ಪ್ರವರ್ತಕರು,ಸರಕಾರಿ ನೌಕರರ ಸಹಕಾರ ಸಂಘ