ಶೀಘ್ರವೇ ಆಟೋ ಚಾಲಕರು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರ್ಪಡೆಯಾಗಲಿದ್ದಾರೆ-ಶಾಸಕ ಅಶೋಕ್ ರೈ

0

ಪುತ್ತೂರು: ಆಟೋ ಚಾಲಕರ ಬಹು ಕಾಲದ ಬೇಡಿಕೆಯನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಈಡೇರಿಸಿದ್ದು ಶೀಘ್ರವೇ ಆಟೋ ಚಾಲಕರು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.


ಅವರು ಉಪ್ಪಿನಂಗಡಿ ನೇತ್ರಾವತಿ ಆಟೋ ಚಾಲಕರ ಸಂಘದ ಸಮಾವೇಶದಲ್ಲಿ ಮಾತನಾಡಿದರು.


ಬಡ ಆಟೋ ಚಾಲಕರು ನಿತ್ಯವೂ ತಮ್ಮ ಕುಟುಂಬವನ್ನು ಸಲಹುವ ಉದ್ದೇಶದಿಂದ ಹಗಲಿರುಳು ಕೆಲಸ ಮಾಡುತ್ತಿದ್ದಾರೆ .ಆಟೋ ಚಾಲಕರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡವರು ಅವರಿಗೆ ಸರಕಾರದಿಂದ ಸಿಗುವ ಸವಲತ್ತುಗಳು ದೊರೆಯಬೇಕು ಎಂದು ನಾನು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಿದ್ದೆ, ಇದರ ಫಲವಾಗಿ ಸರಕಾರ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದರು.

ಏನೇನು ಸೌಲಭ್ಯಗಳು:
*ಆಟೋ ಚಾಲಕರು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರ್ಪಡೆಯಾದಲ್ಲಿ ಈ ಸೌಲಭ್ಯಗಳು ದೊರೆಯುತ್ತದೆ.ಚಾಲಕರು ಅಪಘಾತದಿಂದ ಮೃತಪಟ್ಟಲ್ಲಿ 5 ಲಕ್ಷ ಪರಿಹಾರ,ಸಾಮಾನ್ಯ ಸಾವು ಸಂಭವಿಸಿದ್ದಲ್ಲಿ 10 ಸಾವಿರ ಪರಿಹಾರ,ಚಿಕಿತ್ಸಾ ಸೌಲಭ್ಯ 1 ಲಕ್ಷ,ಮಕ್ಕಳ ವಿದ್ಯಾಬ್ಯಾಸಕ್ಕೆ 3000 ರೂ,ಉನ್ನತ ಶಿಕ್ಷಣಕ್ಕೆ 11000 ರೂ,ಪತ್ನಿ ಹೆರಿಗೆ ಭತ್ಯೆ 10000,ಪತ್ನಿ ಅಕಸ್ಮಿಕ ಅಥವಾ ಅಪಘಾತದಿಂದ ಮರಣಹೊಂದಿದರೆ 5 ಲಕ್ಷ ರೂ. ಹಾಗೂ ಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಶಾಸಕರ ಕಚೇರಿಯಲ್ಲಿ ಉಚಿತ ನೋಂದಣಿ
ಆಟೋ ಚಾಲಕ ಈ ಸೌಲಭ್ಯವನ್ನು ಪಡೆಯಲು ಶಾಸಕರ ಕಚೇರಿಯಲ್ಲಿ ಉಚಿತ ನೋಂದಣಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಶಾಸಕರು ಹೇಳಿದರು.

LEAVE A REPLY

Please enter your comment!
Please enter your name here