ಪುತ್ತೂರು: ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸೊಸೈಟಿಯ ಆವರಣದಲ್ಲಿ ಇತ್ತೀಚೆಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸೊಸೈಟಿಯ ಸಿಇಒ ವಿಕ್ಟರ್ ಶರೋನ್ ಡಿ’ಸೋಜ, ಶಾಖಾ ವ್ಯವಸ್ಥಾಪಕರಾದ ಪ್ರೇಮ್ ರೋಶಲ್ ಡಿ’ಸೋಜ, ಸಿಬ್ಬಂದಿಗಳಾದ ವಾಲ್ಟರ್ ಆರನ್ ಡಿ’ಸೋಜ, ಪವನ್ ಕುಮಾರ್, ವಿಲ್ಮಾ ಪ್ರಿಯಾಂಕಾರವರು ಉಪಸ್ಥಿತರಿದ್ದರು.