ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳಿಂದ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಅತ್ಯುತ್ತಮ ಪ್ರದರ್ಶನ

0

ಪುತ್ತೂರು: ಬೆಂಗಳೂರಿನ ಬಾಗಲೂರ್ ನಲ್ಲಿರುವ, ವಿ.ಜೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಜನವರಿ 3 ಮತ್ತು 4ರಂದು ನಡೆದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ (ರಿ) ವತಿಯಿಂದ ಆಯೋಜಿಸಲಾದ 4ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು.

7ನೇ ತರಗತಿಯ ಮೇಧಾ ಭಟ್ (ಕೃಷ್ಣಮೂರ್ತಿ ಪಿ.ಎಸ್ ಮತ್ತು ಶ್ವೇತಾ ಸರಸ್ವತಿ ಬಿ. ದಂಪತಿ ಪುತ್ರಿ ) ಯೋಜನೆ : ಆಂಟಿಫಂಗಲ್, ಆಂಟಿಬಾಕ್ಟೀರಿಯಲ್ ಆಂಡ್ ಕರ್ಡ್ಲಿಂಗ್ ಪ್ರಾಪರ್ಟೀಸ್ ಆಫ್ ಸ್ವಾತಿ ರೈನ್ ವಾಟರ್, 8ನೇ ತರಗತಿಯ ತುಷಾರ್ ಪಿ.ವಿ( ವೀರಪ್ಪ ಗೌಡ ಮತ್ತು ಭಾರತಿ ಕೆ.ಎಲ್. ದಂಪತಿ ಪುತ್ರ ), ಯೋಜನೆ : ವೆಜ್ಜಿ ವೋಲ್ಟ್ , 9ನೇ ತರಗತಿಯ ವಿದ್ಯಾರ್ಥಿಗಳಾದ ಅದ್ವೈತ್ ಕಜೆ (ಕಿರಣ್ ಕಜೆ ಮತ್ತು ವೀಣಾ ಕಜೆ ದಂಪತಿ ಪುತ್ರ ) ಮತ್ತು ಈಶಾನ್ ಕೆ( ಶ್ರೀಶಾ ಭಟ್ ಮತ್ತು ಶರಣ್ಯ ಕೆ. ದಂಪತಿ ಪುತ್ರ ) ಇವರ ಯೋಜನೆ : ಸೇಫ್ಟಿ ಟ್ರಯಲ್, ಧನ್ಯಶ್ರೀ ಎಚ್. ಪಿ ( ಪ್ರಕಾಶ್ ಎಚ್. ಕೆ ಮತ್ತು ಮಾಲಿನಿ ಕೆ .ಎನ್ ದಂಪತಿ ಪುತ್ರಿ ), ಯೋಜನೆ : ಎ ನೋವೆಲ್ ಗಮ್ ಫ್ರಮ್ ಅಪಿಸ್ ಟ್ರಿಗೋನ ವಾಕ್ಸ್, ಸಂಪ್ರೀತ್ ಡಿ. ( ವಸಂತ್.ಡಿ ಮತ್ತು ಕವಿತಾ ಕೆ.ದಂಪತಿ ಪುತ್ರ) ಮತ್ತು ಮಿಹಿರ್ ಭಟ್ (ಕೇಶವ ಪ್ರಸನ್ನ ಮತ್ತು ಗಾಯತ್ರಿ ಕೆ. ದಂಪತಿ ಪುತ್ರ) ಇವರ ಯೋಜನೆ : ರಿಸ್ಕ್ ಮೋನಿಟರಿಂಗ್ ಸ್ಯಾಟಲೈಟ್ ಸೆನ್ಸರ್, ಶ್ಯಾಮ್ ಎಂ.ಎಸ್ (ಶ್ರೀಕೃಷ್ಣ ಗಣರಾಜ್ ಭಟ್ ಮತ್ತು ಸೌಮ್ಯ ಜಿ. ದಂಪತಿ ಪುತ್ರ), ಯೋಜನೆ : ಡೈನಾಮಿಕ್ ಕ್ವಾಡ್ರಿಲಾಟರಲ್ ಈ ವಿದ್ಯಾರ್ಥಿಗಳೆಲ್ಲರೂ ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ಯೋಜನೆಗಳ ಪ್ರಾತ್ಯಕ್ಷಿಕೆಗಳನ್ನು ಅತ್ಯುತ್ತಮವಾಗಿ ನೀಡಿ, ನೂರಾರು ವೀಕ್ಷಕರ ಪ್ರಶಂಸೆಗೆ ಭಾಜನರಾಗಿರುವರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here