ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ, ಮಾಣಿ ವಲಯದ ಅಳಕೆ ಮಜಲು ಕಿರಿಯ ಪ್ರಾಥಮಿಕ ಶಾಲೆಗೆ ಸಮುದಾಯ ಅಭಿವೃದ್ಧಿ ಜ್ಞಾನ ದೀಪ ಕಾರ್ಯಕ್ರಮದಿಂದ ಡೆಸ್ಕ್, ಬೆಂಚು ವಿತರಣೆ ಮಾಡಲಾಯಿತು.
ಮಾಣಿ ವಲಯ ಅಳಕೆ ಮಜಲು ಸೇವಾ ಪ್ರತಿನಿಧಿ ಸುಗಂಧಿನಿ, ಒಕ್ಕೂಟ ಅದ್ಯಕ್ಷರಾದ ಚಂದ್ರಹಾಸ, ಮತ್ತು ಶೌರ್ಯ ಸದಸ್ಯರು, ಮುಖ್ಯೋಪಾಧ್ಯಾಯರಾದ ಇಸ್ಮಾಯಿಲ್ರವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಫಲ್ಯ, ಶಾಲಾ ಸಹ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರಾದ ತಿರುಮಲೇಶ್ವರ, ಉಪಾಧ್ಯಕ್ಷರಾದ ರೂಪ ಕಿಶೋರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.