ಪುತ್ತೂರು: ಮೆಸ್ಕಾಂನ ಪುತ್ತೂರು ಗ್ರಾಮಾಂತರ ಹಾಗೂ ನಗರ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯು ಜ.9ರಂದು ಕುಂಬ್ರದಲ್ಲಿರುವ ಮೆಸ್ಕಾಂ ಗ್ರಾಮಾಂತರ ಉಪವಿಭಾಗ ಕಛೇರಿಯಲ್ಲಿ ನಡೆಯಲಿದೆ.
ಮೆಸ್ಕಾಂನ ಮಂಗಳೂರು ವೃತ್ತ ಕಚೇರಿಯ ಅಧೀಕ್ಷಕ ಇಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜನ ಸಂಪರ್ಕ ಸಭೆಯು ಬೆ.11ರಿಂದ ಮಧ್ಯಾಹ್ನ 12 ಗಂಟೆಯ ತನಕ ನಡೆಯಲಿದೆ. ಗ್ರಾಹಕರು ಗ್ರಾಮಾಂತರ ಉಪವಿಭಾಗ ಕಛೇರಿಯಲ್ಲಿ ಖುದ್ದಾಗಿ ಅಥವಾ ದೂರವಾಣಿ ಮೂಲಕ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ಅಹವಾಲು ಸಲ್ಲಿಸುವವರು ಸ್ಥಿರ ದೂರವಾಣಿ 08251-285393 ಕರೆ ಮಾಡಿ ಸಲ್ಲಿಸಬಹುದಾಗಿದೆ ಎಂದು ಮೆಸ್ಕಾಂ ನ ಪ್ರಕಟಣೆ ತಿಳಿಸಿದೆ.