ನೆಟ್ಟಣಿಗೆ ಮೂಡ್ನೂರು: ನೆಟ್ಟಣಿಗೆ ಮೂಡ್ನೂರು ಗ್ರಾಮದ ನೆಲ್ಲಿತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ, ವಿಟಮಿನ್ ‘ಎ’, ಸ್ತ್ರೀಶಕ್ತಿ ಸಭೆ ಕಾರ್ಯಕ್ರಮ ನಡೆಯಿತು.
ಕಿರಿಯ ಆರೋಗ್ಯ ಕಾರ್ಯಕರ್ತೆಯಾದ ರಶ್ಮಿ ಆರೋಗ್ಯ ಇಲಾಖಾ ಮಾಹಿತಿ ನೀಡಿದರು.
ಶಶಿಕಿರಣ್ ಕೆಮ್ಮತ್ತಡ್ಕ ಅಂಗನವಾಡಿ ಕೇಂದ್ರಕ್ಕೆ ಬರುವ ದಾರಿಯನ್ನು ಸ್ಟೆಪ್ (ಮೆಟ್ಟಿಲು) ಗಳನ್ನು ನಿರ್ಮಿಸಿಕೊಟ್ಟರು. ಮಕ್ಕಳ ಪೋಷಕರು ಅಂಗನವಾಡಿ ಕೇಂದ್ರಕ್ಕೆ ಸಿಂಟೆಕ್ಸ್ ಟ್ಯಾಂಕಿಯನ್ನು ಕೊಡುಗೆಯಾಗಿ ನೀಡಿದರು. ಪೋಷಕರಿಗೆ ಅಂಗನವಾಡಿ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಪುಟಾಣಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳು, ಬಾಲ ವಿಕಾಸ ಸಮಿತಿ ಅಧ್ಯಕ್ಷರು, ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ಪೋಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಪಿ., ಸಹಾಯಕಿ ಸೀತಮ್ಮ ಉಪಸ್ಥಿತರಿದ್ದರು.