ಜನನಿ ಮ್ಯಾಚಿಂಗ್ ಸೆಂಟರ್, ಟೈಲರಿಂಗ್ ಮೆಟೀರಿಯಲ್ ಸಂಸ್ಥೆ ಶುಭಾರಂಭ

0

ಪುತ್ತೂರು: ಲೈನಿಂಗ್ ಬಟ್ಟೆಗಳು ಸಹಿತ ಟೈಲರಿಂಗ್‌ಗೆ ಬೇಕಾಗುವ ಅಗತ್ಯ ಪರಿಕರಗಳನ್ನೊಳಗೊಂಡ ಜನನಿ ಮ್ಯಾಚಿಂಗ್ ಸೆಂಟರ್ ಜ.8ರಂದು ಬೊಳುವಾರು ಧ್ರುವ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ಮಹಿಳೆಯರಿಗೆ ಬೇಕಾದ ಎಲ್ಲಾ ವಸ್ತುಗಳು ಲಭ್ಯವಾಗಲಿ:

ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯ ಸೌಂದರ್ಯಕ್ಕೆ ಪೂರಕವಾಗಿ ಟೈಲರಿಂಗ್ ಕೂಡಾ ಒಂದು ಸಾಧನವಾಗಿದೆ. ವಸ್ತ್ರವಿನ್ಯಾಸದಲ್ಲಿ ವಿವಿಧ ಶೈಲಿಗಳು ಇವತ್ತು ಅಗತ್ಯ ಬಳಕೆಯಲ್ಲಿದೆ. ಪ್ರೇಮಕ್ಕ ಅವರ ಈ ಸಂಸ್ಥೆಯಲ್ಲಿ ಮಹಿಳೆಯರಿಗೆ ಬೇಕಾದ ಎಲ್ಲಾ ವಿನ್ಯಾಸಗಳು ಲಭ್ಯವಾಗಲಿ ಎಂದು ಹಾರೈಸಿದರು.


ಗ್ರಾಹಕರ ವಿಶ್ವಾಸ ಗಳಿಸಬೇಕು:


ಹಿರಿಯ ಟೈಲರ್ ರಾಜ್ ಟೈಲರ್ ಮಾಲಕ ರಘುನಾಥ್ ಬಿ ಅವರು ಮಾತನಾಡಿ ಹಿಂದೆ ಗುಬ್ಬಿ ಸೂಜಿ ನೂಲು ಇದ್ದರೆ ಟೈಲರ್ ನಡೆಯುತ್ತಿತ್ತು. ಪ್ರಸ್ತುತ ದಿನದಲ್ಲಿ ಸಿದ್ದ ಆಧುನಿಕ ಮೆರುಗಿನಲ್ಲಿ ಹೊಲಿಗೆ ಮಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ನೂತನ ಸಂಸ್ಥೆಯಲ್ಲಿ ಎಲ್ಲಾ ಪರಿಕರಗಳು ಸಿಗಬೇಕು. ಗ್ರಾಹಕರು ಕೇಳಿದ ವಸ್ತುಗಳು ಇಲ್ಲಾ ಎಂದಾಗಬಾರದು. ಸದಾ ಗ್ರಾಹಕರ ವಿಶ್ವಾಸ ಗಳಿಸಬೇಕೆಂದರು.

ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಕೆ ಅವರು ಮಾತನಾಡಿ ನೂತನ ಸಂಸ್ಥೆ ರಾಷ್ಟ್ರಮಟ್ಟದಲ್ಲೂ ಬೆಳಗುವಂತಾಗಲಿ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ ಶುಭ ಹಾರೈಸಿದರು. ನಗರಸಭೆ ಸದಸ್ಯೆ ಗೌರಿ ಬನ್ನೂರು ಪ್ರಾರ್ಥಿಸಿದರು. ಪುರುಷೋತ್ತಮ ಮುಂಗ್ಲಿಮನೆ ಸ್ವಾಗತಿಸಿ, ಸಂಸ್ಥೆಯ ಮಾಲಕಿ ಪ್ರೇಮಲತಾ ಗಣೇಶ್ ನಂದಿಲ ಅವರು ವಂದಿಸಿದರು.

ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಸದಸ್ಯರಾದ ಶಶಿಕಲಾ ಸಿ.ಎಸ್, ಸಂಸ್ಥೆಯ ಮಾಲಕಿ ಪ್ರೆಮಲತಾ ಗಣೇಶ್ ಅವರ ತಾಯಿ ರತ್ನಾವತಿ, ಅತ್ತೆ ಕಮಲ, ಪತಿ ಗಣೇಶ್, ನಂದಿಲ ಮನೆಯವರಾದ ಶಾಂತಾರಾಮ ಮತ್ತು ವಿದ್ಯಾ ಶಾಂತರಾಮ, ರಾಧಾಕೃಷ್ಣ ಮತ್ತು ಸುನಿತಾ ರಾಧಾಕೃಷ್ಣ, ಸಂಬಂಧಿಕರಾದ ವಿದ್ಯಾಪುರುಷೋತ್ತಮ, ಬಿಜೆಪಿ ಪ್ರಮುಖರಾದ ಜ್ಯೋತಿ ನಾಯಕ್, ಸ್ವರ್ಣಲತಾ ಹೆಗ್ಡೆ, ವಸಂತಲಕ್ಷ್ಮೀ ಸಹಿತ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.


ಟೈಲರಿಂಗ್‌ಗೆ ಒಂದೇ ಸೂರಿನಡಿ ಅಗತ್ಯ ಸೇವೆ
ನಮ್ಮಲ್ಲಿ ಟೈಲರಿಂಗ್ ಸಾಮಾಗ್ರಿಗಳು ಮತ್ತು ಮಹಿಳೆಯರಿಗೆ ಬೇಕಾಗುವ ಲೈನಿಂಗ ಬಟ್ಟೆಗಳು, ವಿವಿಧ ವಿನ್ಯಾಸದ ಬಟನ್‌ಗಳು ಜೊತೆಗೆ ಸಾರಿಗೆ ಗೊಂಡೆ ಹಾಕಿ ಕೊಡುವ ಹಾಗು ಇತರ ಕೌಶಲ್ಯ ಕೆಲಸಗಳನ್ನು ಮಾಡಿಕೊಡಲಾಗುವುದು. ಒಂದೇ ಸೂರಿನಡಿ ಅಗತ್ಯ ಸೇವೆ ಇಲ್ಲಿ ಸಿಗುತ್ತದೆ.
ಪ್ರೇಮಲತಾ ಗಣೇಶ್

LEAVE A REPLY

Please enter your comment!
Please enter your name here