ಪುತ್ತೂರು: ಪುತ್ತೂರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇದರ ಚುನಾವಣೆಯನ್ನು ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಚುನಾವಣೆಯನ್ನು ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣ ಮತ್ತು ವಠಾರದಲ್ಲಿ ಜ.19 ರಂದು ಪೂವಾಹ್ನ 9.೦೦ ಗಂಟೆಯಿಂದ ಅಪರಾಹ್ನ 4.೦೦ ಗಂಟೆಯವರೆಗೆ ಚುನಾವಣೆ ಜರಗಲಿದ್ದು, ಸ್ಪರ್ಧಿಸಲು ಇಚ್ಚಿಸುವ ಬ್ಯಾಂಕಿನ ಅರ್ಹ ಸದಸ್ಯರು ತಮ್ಮ ನಾಮಪತ್ರವನ್ನು ಬ್ಯಾಂಕಿನ ಕೇಂದ್ರ ಕಛೇರಿಯಲ್ಲಿ ಜ.11 ವರೆಗೆ ಪೂವಾಹ್ನ 10 ಗಂಟೆಯಿಂದ ಅಪರಾಹ್ನ 12.30- ಗಂಟೆಯವರೆಗೆ ಬ್ಯಾಂಕಿನ ಕೇಂದ್ರ ಕಛೇರಿಯಲ್ಲಿ ಸಲ್ಲಿಸತಕ್ಕದು ಎಂದು ಚುನಾವಣಾ ಅಧಿಕಾರಿ ಎಸ್. ಎಂ. ರಘುರವರು ತಿಳಿಸಿದ್ದಾರೆ.
ಮೂರು ಮಂದಿ ನಾಮ ಪತ್ರ ಸಲ್ಲಿಕೆ
ಜ.7 ರಂದು ಒಬ್ಬರು ಮತ್ತು ಜ.8 ರಂದು ಈರ್ವರು ನಾಮ ಪತ್ರ ಸಲ್ಲಿಸಿದ್ದಾರೆ. ಜ.7 ರಂದು ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಬಾಬು ಮುಗೇರ ಬಾವಿಕಟ್ಟೆ ಮತ್ತು ಜ.8 ರಂದು ಕಾಂಗ್ರೆಸ್ ಬೆಂಬಲಿತ ರಾಜಶೇಖರ ಜೈನ್ ಹಾಗೂ ವಿಕ್ರಂ ರೈ ಸಾಂತ್ಯ ನಾಮಪತ್ರ ಸಲ್ಲಿಸಿದ್ದಾರೆ.