ಸವಣೂರು: ಶ್ರೀರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸವಣೂರು ಗ್ರಾಮ ಪಂಚಾಯತ್ ಇದರ ಅಡಿಯಲ್ಲಿ ಸವಣೂರು ಗ್ರಾಮದ ಬಾರಿಕೆ ಎಂಬಲ್ಲಿ ಶ್ರೀ ಚಾಮುಂಡೇಶ್ವರಿ ಸಂಜೀವಿನಿ ಸಂಘ ಉದ್ಘಾಟನೆಗೊಂಡಿತು.
ಪದ್ಮಾವತಿರವರು ನೂತನ ಸಂಘವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷರಾಗಿ ವೆಂಕಮ್ಮ ಸದಾನಂದ ಗೌಡ ಹಾಗೂ ಕಾರ್ಯದರ್ಶಿಯಾಗಿ ಜ್ಯೋತಿ ಚೇತನ್ ಕೆ., ಅವರನ್ನು ಆಯ್ಕೆ ಮಾಡಲಾಯಿತು. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಗೀತಾ ಜಿ.ಎಸ್. ಅವರು ಸಂಜೀವಿನಿ ಯೋಜನೆ ಬಗ್ಗೆ, ವಿಮೆಯ ಬಗ್ಗೆ, ಗ್ರಾಮೀಣ ರೈತ ಸಂತೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಚಂದ್ರಿಕಾ, ಲತಾ, ಭವ್ಯ, ಕಲಾವತಿ, ಮೋಹಿನಿ, ಕುಸುಮಾವತಿ, ನಳಿನಾಕ್ಷಿ, ಜಯಂತಿ ಹಾಗೂ ಎಲ್ಸಿಆರ್ಪಿ ಉಷಾ ಉಪಸ್ಥಿತರಿದ್ದರು.