ಪುತ್ತೂರು: ಕೆದಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ 12 ಸ್ಥಾನದಲ್ಲೂ ಅಭೂತಪೂರ್ವ ಗೆಲುವನ್ನು ಸಾಧಿಸಿದ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳಿಗೆ ಬಿಜೆಪಿ ಕಚೇರಿಯಲ್ಲಿ ಅಭಿನಂದನಾ ಕಾರ್ಯಕ್ರಮ ಜ.9ರಂದು ನಡೆಯಿತು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅಭ್ಯರ್ಥಿಗಳನ್ನು ಅಭಿನಂದಿಸಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿಬಿ, ಬಿಜೆಪಿ ಸಂಘಟನಾ ಪರ್ವ ಜಿಲ್ಲಾ ಸಹ-ಚುನಾವಣಾಧಿಕಾರಿ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಸಹಕಾರ ಭಾರತಿ ಕಾರ್ಯದರ್ಶಿ ನಾರಾಯಣ ಪ್ರಕಾಶ್, ಮಂಡಲ ಉಪಾಧ್ಯಕ್ಷರುಗಳಾದ ಹರಿಪ್ರಸಾದ್ ಯಾದವ್, ಯತೀoದ್ರ ಕೊಚ್ಚಿ, ಯುವರಾಜ್ ಕೆ ಪೆರಿಯತ್ತೊಡಿ, ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಕಚೇರಿ ಕಾರ್ಯದರ್ಶಿ ಗೋವರ್ಧನ್, ನಿಕಟಪೂರ್ವ ಅರಿಯಡ್ಕ ಶಕ್ತಿ ಕೇಂದ್ರ ಪ್ರಮುಖ್ ಸಚಿನ್ ರೈ, ನಿಕಟಪೂರ್ವ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುರೇಶ್ ಆಳ್ವ, ಪಕ್ಷದ ಹಿರಿಯರಾದ ವಿಶ್ವನಾಥ ಕುಲಾಲ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.