ಜನವರಿ 11ರಂದು ಪುತ್ತೂರಿನಲ್ಲೂ ನೂತನ ಘಟಕ ಆರಂಭ
ವೃತ್ತಿಯ ಬಗ್ಗೆ ನಂಬಿಕೆ, ಸಮಾಜದ ಬಗ್ಗೆ ಕಾಳಜಿ, ತನ್ನೊಂದಿಗೆ ಜೊತೆಗಿರುವವರೂ ಬೆಳೆಯಬೇಕು ಎಂಬ ಮಾನವೀಯ ಮೌಲ್ಯಇರುವವರು ಮಾತ್ರ ಯಾವುದೇ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯ. ನೀವೆಲ್ಲಾ ಮಂಗಳೂರಿನ ಪಂಪ್ವೆಲ್ ಬಳಿ ಕೇಂದ್ರ ಕಚೇರಿ ಹೊಂದಿರುವ ಭಾರತ್ ಅಗ್ರೋವೆಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನ ಒಂದು ಭಾಗವಾದ ಭಾರತ್ಸ್ ಫ್ರೆಶ್ ಚಿಕನ್ಸ್ ಹೆಸರು ಕೇಳಿರುತ್ತೀರಿ. ಈ ಉದ್ಯಮದ ಹುಟ್ಟು ಮತ್ತು ಬೆಳವಣಿಗೆ ಮೇಲಿನ ಮಾತಿಗೊಂದು ಉದಾಹರಣೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಕೋಳಿ ಸಾಕಾಣಿಕೆಯಲ್ಲಿ ಅಳವಡಿಸಿಕೊಂಡು, ಜನರಿಗೆ ಪ್ರೊಟೀನ್ಯುಕ್ತ ಆಹಾರವನ್ನು ಕಡಿಮೆದರದಲ್ಲಿ ಒದಗಿಸಬೇಕು, ಇಡೀ ಉದ್ಯಮಕ್ಕೇ ಹೊಸ ರೂಪಕೊಟ್ಟು ಉದ್ಯೋಗಗಳನ್ನು ಸೃಷ್ಟಿಸಿ ದೇಶದ ಆರ್ಥಿಕತೆಗೆ ಈ ಮೂಲಕ ಇನ್ನಷ್ಟು ನೆರವಾಗಬೇಕು ಎಂಬ ಕನಸಿನೊಂದಿಗೆ ಈ ಸಂಸ್ಥೆ ಪ್ರಾರಂಭವಾಗಿದೆ.
ಕೋಳಿ ಸಾಕಾಣೆಗೆ ಹೊಸ ರೂಪ:
ಪ್ರಪಂಚದಲ್ಲಿ ಕೋಳಿ ಸಾಕಾಣೆಗೆ ಹೊಸ ರೂಪ ಬರಲಾರಂಭಿಸಿದ್ದು 1960 ನೇ ದಶಕದಲ್ಲಿ. ಏರುತ್ತಿರುವ ಜನಸಂಖ್ಯೆ, ಪರಿಣಾಮ ಆಹಾರದ ಅಭಾವ ಈ ಸಂದರ್ಭದಲ್ಲಿ ಪರಿಹಾರವಾಗಿ ಕಂಡದ್ದು ಆಹಾರ ಬೆಳೆಗಳ ಹೈಬ್ರಿಡೈಸೇಶನ್. ಇದು ಕೋಳಿ ಸಾಕಾಣೆಯಲ್ಲೂ ನಡೆಯಿತು. ಹೇಗೆ ತೆಂಗಿನ ಮರವೊಂದು ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಇಳುವರಿ ಕೊಡುವಂತೆ ಮಾಡಲಾಯಿತೋ ಹಾಗೆಯೇ ಕೋಳಿ ಸಾಕಾಣೆಯಲ್ಲೂ ಹೈಬ್ರಿಡೈಸೇಶನ್ ಆರಂಭವಾಯಿತು.
ಭಾರತ್ಅಗ್ರೋವೆಟ್ ಇಂಡಸ್ಟ್ರೀಸ್ ಸಂಸ್ಥೆಯ ಆರಂಭ:
1980 ನೇ ದಶಕದಿಂದ ಕೋಳಿ ಸಾಕಾಣೆಯಲ್ಲಿ ಹೈಬ್ರಿಡೈಸೇಶನ್ ವಿದೇಶಗಳಲ್ಲಿ ಸಾಮಾನ್ಯವಾಗುತ್ತಾ ಹೋದಂತೆ ಭಾರತದಲ್ಲಿಯೂ ಕೆಲವು ಕಂಪೆನಿಗಳು ಗುಣಮಟ್ಟದ ಕೋಳಿ ಮಾಂಸವನ್ನು ಉತ್ಪಾದಿಸಲು ಇರುವ ಅವಕಾಶವನ್ನು ಕಂಡುಕೊಂಡವು. ಇವುಗಳಲ್ಲಿ ಒಂದು ಭಾರತ್ ಅಗ್ರೋವೆಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್. 2005 ರಲ್ಲಿ ಆರಂಭವಾದ ಈ ಸಂಸ್ಥೆ ಜೋಳ, ಸೋಯ ಬೆಳೆಯುವ ರೈತರಿಂದ ಹಿಡಿದು ವಾಹನೋದ್ಯಮದವರೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದೆ.
ಭಾರತ್ಅಗ್ರೋವೆಟ್ ಇಂಡಸ್ಟ್ರೀಸ್ ಸಂಸ್ಥೆಯ ಚಟುವಟಿಕೆಗಳು :
ಭಾರತ್ ಅಗ್ರೋವೆಟ್ ಇಂಡಸ್ಟ್ರೀಸ್ ಸಂಸ್ಥೆ ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು ಹಾಸನ ಜಿಲ್ಲೆಯ ನಾಲ್ಕು ಕಡೆ ಬ್ರೀಡಿಂಗ್ ಘಟಕಗಳನ್ನು ಹೊಂದಿದೆ. ಇಲ್ಲಿ ವಿದೇಶಿ ಮತ್ತು ದೇಶಿ ತಂತ್ರಜ್ಞಾನದ ಬ್ಯಾಟರಿ ಕೇಜಸ್ಗಳನ್ನು ಅಳವಡಿಸಿಕೊಳ್ಳಲಾಗಿದ್ದು, ವಾರ್ಷಿಕ ಸುಮಾರು 10 ಮಿಲಿಯನ್ ಹ್ಯಾಚಿಂಗ್ ಮೊಟ್ಟೆಗಳನ್ನು ಉತ್ಪಾದಿಸಲಾಗುತ್ತದೆ. ಇಲ್ಲಿ ಉತ್ಪಾದಿಸಿದ ಮೊಟ್ಟೆಗಳನ್ನು ಸಂಸ್ಥೆಯ ಬಿ.ಸಿರೋಡ್ ಮತ್ತು ಕುಂದಾಪುರದಲ್ಲಿರುವ ಮರಿ ಉತ್ಪಾದನಾ ಘಟಕಗಳಿಗೆ ಸಾಗಿಸಿ ಅಲ್ಲಿ ಮರಿಗಳನ್ನು ಉತ್ಪಾದಿಸಲಾಗುತ್ತದೆ.
ಇಲ್ಲಿಂದ ಕೋಳಿ ಮರಿಗಳನ್ನು ಮಾರುಕಟ್ಟೆಗೆ ಮತು ಕಾಂಟ್ರಾಕ್ಟ್ ಬ್ರಾಯರ್ ಫಾರ್ಮ್ ಗಳಿಗೆ ವಿತರಿಸಲಾಗುತ್ತದೆ. ಇದಕ್ಕೆ ಬೇಕಾಗುವ ಆಹಾರವನ್ನು ತುಂಬೆ ಪರಿಸರದಲ್ಲಿರುವ ಆಧುನಿಕ ತಂತ್ರಜ್ಞಾನದ ಆಹಾರ ತಯಾರಿಕಾ ಘಟಕಗಳಲ್ಲಿ ತಯಾರಿಸಲಾಗುತ್ತದೆ. ಈಗಾಗಲೇ 5000 ಟನ್ ಸಾಮರ್ಥ್ಯದ ಘಟಕಕ್ಕೆ ಇನ್ನೊಂದು 5000 ಟನ್ ಸಾಮರ್ಥ್ಯದ ಘಟಕ ಸೇರ್ಪಡೆಯಾಗಲಿದೆ. ಒಪ್ಪಂದ ಆಧಾರಿತ ಕೃಷಿಕರಿಂದ ಬೆಳೆಸಲ್ಪಟ್ಟ ಕೋಳಿಗಳನ್ನು ಸಂಸ್ಥೆಯು ಫಾರ್ಮ್ಗಳಿಂದಲೇ ಮಾರುಕಟ್ಟೆಗೆ ಮಾರುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದ ಕೋಳಿಗಳನ್ನು ಸಂಸ್ಥೆ ಕೋಳಿ ಸಂಸ್ಕರಣಾ ಘಟಕಕ್ಕೆ ಕಳುಹಿಸಿ ಅಲ್ಲಿ ಸಂಸ್ಕರಿಸಿದ ಕೋಳಿ ಮಾಂಸವನ್ನು ವಿವಿಧ ಮಾರುಕಟ್ಟೆಗಳಾದ ಹೊಟೇಲ್, ರೆಸ್ಟೋರೆಂಟ್ಗಳಿಗೆ ಪೂರೈಸಲಾಗುತ್ತದೆ. ಅಲ್ಲದೆ ತನ್ನದೇ ಮಾರಾಟ ಮಳಿಗೆಗಳ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ.
ಪುತ್ತೂರಿನಲ್ಲಿ ಜ. 11ರಂದು 14ನೇ ಶಾಖೆ ಆರಂಭ:
ವೈಜ್ಞಾನಿಕ ವಿಧಾನದಲ್ಲಿ ಬೆಳೆಸಿದ ಕೋಳಿಗಳಿಂದ ಗ್ರಾಹಕರಿಗೆ ಸೂಕ್ತ ದರದಲ್ಲಿ ಆಹ್ಲಾದಕರ ವಾತಾವರಣದಲ್ಲಿ ಸ್ವಚ್ಛ ಕೋಳಿ ಮಾಂಸವನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಭಾರತ್ ಫ್ರೆಶ್ಚಿಕನ್ಸ್ ಹೆಸರಿನ ಮಳಿಗೆಗಳನ್ನು ಪ್ರಾಂಭಿಸಲಾಯಿತು. ಈಗಾಗಲೇ ಮಂಗಳೂರು, ಉಡುಪಿ, ಮಣಿಪಾಲಗಳಲ್ಲಿ ಹಲವು ಮಳಿಗೆಗಳನ್ನು ಆರಂಭಿಸಿರುವ ಸಂಸ್ಥೆ ಇದೀಗ ಪುತ್ತೂರಿನಲ್ಲಿ ಈ ಪ್ರದೇಶದ ಗ್ರಾಹಕರಿಗಾಗಿ 14ನೇ ಮಾರಾಟ ಮಳಿಗೆಯನ್ನು ತೆರೆದಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಜನವರಿ 11ರಂದು ಪುತ್ತೂರಿನ ಮಹಾಲಸಾ ಆರ್ಕೇಡ್ನಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.
ನೂರಾರು ಮಂದಿಗೆ ಉದ್ಯೋಗ:
ಭಾರತ್ಅಗ್ರೋವೆಟ್ ಇಂಡಸ್ಟ್ರೀಸ್ನಲ್ಲಿ ಸುಮಾರು 650ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ. ಆದರೆ ಸಂಸ್ಥೆಯ ಮೂಲಕ ಸಾವಿರಾರು ಮಂದಿ ಪರೋಕ್ಷ ಉದ್ಯೋಗ ಪಡೆದುಕೊಂಡಿದ್ದಾರೆ. ಶಿವಮೊಗ್ಗ, ದಾವಣಗೆರೆ, ಶಿಕಾರಿಪುರ, ಹಾಸನ, ಹುಬ್ಬಳ್ಳಿ ಮೊದಲಾದ ಪ್ರದೇಶಗಳಿಂದ ಸಂಸ್ಥೆ ಕೋಳಿ ಆಹಾರಕ್ಕೆ ಅಗತ್ಯವಿರುವ ಮೆಕ್ಕೆಜೋಳ ಮತ್ತು ಹೊರ ರಾಜ್ಯಗಳಿಂದ ಸೋಯಾ ಖರೀದಿಸುತ್ತಿದೆ. ನೂರಾರು ಕೋಳಿ ಸಾಕಾಣೆದಾರರು ಸಂಸ್ಥೆಯಿಂದ ಕೋಳಿ ಮರಿಗಳನ್ನು ಮತ್ತು ಆಹಾರವನ್ನು ಖರೀದಿಸುತ್ತಿದ್ದಾರೆ. ಕರಾವಳಿ ಜಿಲ್ಲೆಗಳ 600 ಕ್ಕೂ ಹೆಚ್ಚು ರೈತರು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಕೋಳಿ ಸಾಕುತ್ತಿದ್ದಾರೆ. ತಿಂಗಳಿಗೆ 10 ಲಕ್ಷಕ್ಕೂ ಅಧಿಕ ಮಾಂಸದ ಕೋಳಿಗಳು ತಯಾರಾಗುತ್ತಿವೆ.
ಕೋಳಿ ಸಾಕಾಣೆ ಏಕೆ ಮುಖ್ಯ? :
ಪ್ರೊಟೀನ್ ಕೊರತೆ ಅನುಭವಿಸುತ್ತಿರುವ ನಮ್ಮಂತಹ ದೇಶದಲ್ಲಿ ಅತ್ಯಂತ ಸೂಕ್ತ ಪ್ರೊಟೀನ್ ಹೊಂದಿರುವ ಕೋಳಿ ಮಾಂಸ, ಈ ಕೊರತೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮಗೆ ತಿಳಿದಿರುವಂತೆ ನಮ್ಮ ದೇಶದ ಬೆನ್ನೆಲುಬು ಕೃಷಿ. ಈ ಕೃಷಿಯ ದೊಡ್ಡ ಭಾಗ ಪಶು ಸಂಗೋಪನೆ, ವಿಶೇಷವಾಗಿ ಹೈನುಗಾರಿಕೆ ಮತ್ತು ಕೋಳಿ ಸಾಕಾಣೆ. ಹೈನುಗಾರಿಕೆ ಕೊಂಚ ದುಬಾರಿಯಾಗುತ್ತಿರುವ ಸಮಯದಲ್ಲಿ ಕೋಳಿ ಸಾಕಾಣೆ ಯುವಕರನ್ನು ಕೃಷಿಯತ್ತ ಆಕರ್ಷಿಸುತ್ತಿದೆ. ಗ್ರಾಮೀಣ ಆರ್ಥಿಕತೆಗೆ ಕೋಳಿ ಸಾಕಾಣೆ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಈಗಲೂ ಸುಸ್ಥಿರ ಕೃಷಿ ಸಾಧ್ಯಎಂಬುದು ಸಾಬೀತಾಗಿದೆ.
ಕೋಳಿ ಸಾಕಾಣೆಯೇ ಏಕೆ? :
ಮಾಂಸಾಹಾರಿಗಳಿಗೆ ಕೋಳಿಯ ಹೊರತಾಗಿಯೂ ಆಯ್ಕೆಗಳಿವೆ. ಮಟನ್, ಮೀನು, ಹಂದಿ ಮಾಂಸ ಪ್ರಿಯರೂ ಇದ್ದಾರೆ. ಆದರೆ ಜಗತ್ತಿನಲ್ಲೇ ಇವೆಲ್ಲವುಗಳಿಗಿಂತ ಚಿಕನ್ಗೆ ಹೆಚ್ಚಿನ ಬೇಡಿಕೆಯಿದೆ. ಕಾರಣ ಅವೆಲ್ಲವುಗಳು ಭಾರೀ ದುಬಾರಿ. ಸಾಮಾನ್ಯಜನರು ಅದನ್ನು ಕೊಂಡು ಕರಗಿಸಿಕೊಳ್ಳುವುದು ಅಸಾಮಾನ್ಯ ಸಂಗತಿ. ಜೊತೆಗೆ ಹಂದಿ ಮಾಂಸವನ್ನು ಕೆಲವು ಸಮುದಾಯದವರು ತಿನ್ನುವುದಿಲ್ಲ. ಆದರೆ ಕೋಳಿ ಮಾಂಸ ಇವೆಲ್ಲವುಗಳಿಗೆ ಹೋಲಿಸಿದರೆ ಕೈಗೆಟುಕುವ ದರದಲ್ಲಿ ಸಿಗುತ್ತದೆ, ಧಾರ್ಮಿಕ ಅಡೆತಡೆಗಳೂ ಇಲ್ಲ. ಹಾಗಾಗಿ ಮಾರಾಟದಲ್ಲೂ ಚಿಕನ್ ಮುಂದಿದೆ.
ಕೋಳಿ ಸಾಕಾಣೆಗೆ ಇದೆ ಇನ್ನಷ್ಟು ಅವಕಾಶ:
ಕೋಳಿ ಸಾಕಾಣೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳಾಗಿರುವುದೂ ವರದಾನವಾಗಿದೆ. ಇದರಿಂದ ಈಗ ಅತ್ಯಂತ ಪೌಷ್ಠಿಕಾಂಶಯುಕ್ತ ಚಿಕನ್ ಅನ್ನು ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ಸಾಧ್ಯವಾಗಿದೆ. ಅಂಕಿ ಅಂಶಗಳ ಪ್ರಕಾರ, ಭಾರತ ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕೋಳಿ ಮಾಂಸ ಉತ್ಪಾದನೆಯಲ್ಲಿ ಐದನೇ ಸ್ಥಾನದಲ್ಲಿದೆ. ಆದರೆ ಮೊಟ್ಟೆ, ಚಿಕನ್ ಸೇವನೆಯಲ್ಲಿ ಭಾರತೀಯರು ತುಂಬಾ ಹಿಂದಿದ್ದಾರೆ. ಹೊರದೇಶಗಳ ಸೇವನೆಯ ಪ್ರಮಾಣವನ್ನು ಗಮನಿಸಿದರೆ, ನಮ್ಮ ದೇಶದ ಉತ್ಪಾದನೆ 8 ಪಟ್ಟು ಹೆಚ್ಚಾಗಬೇಕಾಗುತ್ತದೆ. ಐಸಿಎಂಆರ್ (ಇಂಡಿಯನ್ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್) ಹೇಳುವ ಪ್ರಮಾಣಕ್ಕೆ ತಲುಪಬೇಕಾದರೆ ಈಗಿನ ಉತ್ಪಾದನೆ ಎರಡು ಪಟ್ಟು ಹೆಚ್ಚಾಗುವ ಅಗತ್ಯವಿದೆ.
ಪೌಲ್ಟ್ರಿ ಬಗೆಗಿನ ಮಿಥ್ಯೆಗಳು :
ಪೌಲ್ಟ್ರಿ ಬಗ್ಗೆ ಸಾಕಷ ತಪ್ಪು ಕಲ್ಪನೆಗಳಿವೆ. ಕೋಳಿಗಳು ಬೇಗ ಬೆಳೆಯಲು ಸ್ಟಿರಾಯ್ಡ್ ಚುಚ್ಚುತ್ತಾರಂತೆ, ಕೆಮಿಕಲ್ ಬಳಸುತ್ತಾರಂತೆ, ಅದನ್ನುತಿಂದರೆ ಮಕ್ಕಳು ಬೇಗನೆ ಪ್ರೌಢಾವಸ್ಥೆಗೆ ಬರುತ್ತಾರಂತೆ ಹೀಗೆಲ್ಲಾ ಸಾಕಷ್ಟು ಮಿಥ್ಯೆಗಳಿವೆ. ಆದರೆ ಕೋಳಿ ಸಾಕಾಣೆ ಕ್ಷೇತ್ರದಲ್ಲಿಆಗಿರುವಷ್ಟು ಸಂಶೋಧನೆ ಮನುಷ್ಯನ ಆಚಾರದ ಬಗ್ಗೆಯೂ ಆಗಿಲ್ಲ. ಕೋಳಿ ಸಾಕಾಣಿಕೆಯಲ್ಲಿ ಪಾಲಿಸಲಾಗುವ ವೈಜ್ಞಾನಿಕ ವಿಧಾನ ಅದನ್ನು ಸಾಕಷ್ಟು ಅಪಾಯ ರಹಿತವಾಗಿಸಿದೆ. ಕೋಳಿ ಮಾಂಸ ಅತ್ಯಂತ ಕಡಿಮೆ ದರದಲ್ಲಿ ಸಿಗುವ ಶ್ರೇಷ್ಠ ಪ್ರೊಟೀನ್ ಆಗಿದೆ.
ಹಾಗಾದರೆ ಯಾಕೀ ಪ್ರಶ್ನೆಗಳು? :
ಒಂದು ಲೆಕ್ಕಾಚಾರದ ಪ್ರಕಾರ, 1990ರ ದಶಕದಲ್ಲಿ ಒಂದು ಕೋಳಿ 2 ಕೆಜಿಯಷ್ಟು ಬೆಳೆಯಬೇಕಾದರೆ ಸುಮಾರು 8 ವಾರ ಬೇಕಾಗುತ್ತಿತ್ತು, ಸುಮಾರು 6 ಕೆಜಿ ಕೋಳಿ ಆಹಾರ ಖರ್ಚಾಗುತ್ತಿತ್ತು. ಆದರೆ ಈಗ ಕೋಳಿ 2 ಕೆಜಿಯಷ್ಟು ತೂಕಕ್ಕೆ ಬರಲು ಕೇವಲ 34 ದಿನಗಳು ಸಾಕು, ಅದೂ ಕೇವಲ 3 ಕೆಜಿ ಫೀಡ್ನಲ್ಲಿ. ಸಂಶೋಧನೆಗಳ ಫಲವಾಗಿ ಆಗಿರುವ ಈ ಸಾಧ್ಯತೆ ಜನರಲ್ಲಿ ಅನುಮಾನಗಳಿಗೂ ಕಾರಣವಾಗಿದೆ. ಈ ಮಿಥ್ಯೆಗಳನ್ನು ಹೋಗಲಾಡಿಸಲು ಕೋಳಿ ಸಾಕಾಣೆದಾರರು ಮತ್ತು ಮಾಧ್ಯಮ ಜೊತೆಯಾಗಬೇಕು.
ಪತ್ರಕರ್ತರು ಅರೆಬರೆ ತಿಳುವಳಿಕೆಯೊಂದಿಗೆ ಬರೆದರೆ ಜನರನ್ನು ತಪ್ಪುದಾರಿ ಗೆಳೆದಂತಾಗುತ್ತದೆ. ಅವರು ಉದ್ಯಮದಲ್ಲಿ ಸಕ್ರಿಯರಾಗಿರುವ ನಮ್ಮಂತವರನ್ನು ಸಂಪರ್ಕಿಸಲಿ, ಎಷ್ಟು ಬೇಕಾದರೂ ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಲಿ, ಎಂದು ಸಂಸ್ಥೆಯ ಆಡಳಿತ ನಿರ್ದೇಶಕ, ವೃತ್ತಿಯಲ್ಲಿ ಪಶು ವೈದ್ಯರೂ ಆಗಿರುವ ಡಾ. ಅರುಣ್ ಕುಮಾರ್ ರೈ ಹೇಳುತ್ತಾರೆ. ಮಕ್ಕಳಿಗೆ ಚುಚ್ಚುಮದ್ದು ಕೊಟ್ಟಂತೆ, ಮರಕ್ಕೆ ಗೊಬ್ಬರ ಹಾಕಿದಂತೆ ಬ್ರಾಯ್ಲರ್ ಕೋಳಿಗಳಿಗೂ ಪ್ರತಿ ಹಂತದಲ್ಲೂ ಆರೋಗ್ಯ ಕೆಡದಂತೆ ಚುಚ್ಚುಮದ್ದು ನೀಡಬೇಕಾಗುತ್ತದೆ. ಇದಕ್ಕೆ ಅನ್ಯಾರ್ಥ ಕಲ್ಪಿಸುವುದು ಸರಿಯಲ್ಲ. ಸಾವಯವ ತರಕಾರಿಗಳು ಮತ್ತು ಕೋಳಿ ಮಾಂಸ ಉತ್ತಮ ಎಂಬುದೇನೋ ನಿಜ, ಆದರೆ ಅದರಿಂದ ಎಲ್ಲರ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ, ಎನ್ನುತ್ತಾರೆ ಅವರು.
ಜನರ ಪ್ರತಿಕ್ರಿಯೆ ಹೇಗಿದೆ? :
ಶೀತಲೀಕರಿಸಿದ ಬ್ರಾಯ್ಲರ್ ಕೋಳಿ ಮಾಂಸ ವಿದೇಶಗಳಲ್ಲಿ ಹೊಸದೇನೂ ಅಲ್ಲ. ಹಾಗಾಗಿ ಭಾರತದಲ್ಲೂ ಅನಿವಾಸಿ ಭಾರತೀಯರು ಸಹಜವಾಗಿಯೇ ಇದರತ್ತ ಹೆಚ್ಚು ಒಲವು ತೋರಿದ್ಧಾರೆ. ಈಗ ಇದು ಜನಸಾಮಾನ್ಯರನ್ನೂ ತಲುಪಿದೆ. ಭಾರತ್ ಫ್ರೆಶ್ ಚಿಕನ್ಸ್ ಮಳಿಗೆಗಳ ಯಶಸ್ಸಿಗೂ ಇದೇ ಕಾರಣ. ಇದರ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿದರೆ, ನಮ್ಮ ದೇಶದಲ್ಲಿ ಅದೊಂದು ಕ್ರಾಂತಿಯಾಗಬಹುದು. ಬ್ರಾಯ್ಲರ್ ಕೋಳಿ ಸಾಕುವ ಮತ್ತು ನಂತರದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ಯಾರು ಬೇಕಾದರೂ ಬಂದು ನೋಡಬಹುದು. ಇದರಲ್ಲಿ ಮುಚ್ಚುಮರೆಯಿಲ್ಲ.
ಭಾರತ್ ಅಗ್ರೋವೆಟ್ ಹೇಗೆ ಭಿನ್ನ? :
ಭಾರತ್ ಅಗ್ರೋವೆಟ್ ಸಂಸ್ಥೆ ಬೇರೆಯವರಿಗಿಂತ ಭಿನ್ನವಾಗಿದ್ದು ಇಲ್ಲಿನ ಯಶೋಗಾಥೆ ಸಂಪೂರ್ಣವಾಗಿ ತಂಡ ಪ್ರಯತ್ನವಾಗಿರುತ್ತದೆ. ಇಲ್ಲಿಗೆ ಬರುವ ಎಲ್ಲಾ ಕೆಲಸಗಾರರಿಗೆ ಆರಂಭದಲ್ಲಿ ಒಂದಷ್ಟು ಮೌಲ್ಯಗಳನ್ನು ಹೇಳಿಕೊಡಲಾಗುತ್ತದೆ ಮತ್ತು ಅವರದನ್ನು ಅನುಸರಿಸುತ್ತಾರೆ. ಇಲ್ಲಿ ಯಾರೂ ಯಾರದೋ ಒತ್ತಾಯಕ್ಕೆ ಕೆಲಸ ಮಾಡುವುದಿಲ್ಲ. ಈ ಸಂಸ್ಥೆ ತಮ್ಮದು ಎಂಬ ಪ್ರೀತಿಯಿಂದ ಕೆಲಸ ಮಾಡುತ್ತಾರೆ. ಹೀಗಾದಾಗ ಪ್ರತಿ ವ್ಯಕ್ತಿಯೂ ತನ್ನಲ್ಲಿ ಸುಪ್ತವಾಗಿರುವ ಶ್ರದ್ಧೆ, ಪ್ರಾಮಾಣಿಕತೆ, ಶ್ರಮ ಮತ್ತು ಮಾನವೀಯತೆಯೊಂದಿಗೆ ದುಡಿದು ಸಂಸ್ಥೆಯ ಬೆಳವಣಿಗೆಗೆ ಕಾರಣೀಕರ್ತರಾಗಿದ್ದಾರೆ, ಎಂಬುದು ಸಂಸ್ಥೆಯ ಆಡಳಿತ ನಿರ್ದೇಶಕರ ಅಭಿಪ್ರಾಯ.
ಸಂಸ್ಥೆಯ ಯಶೋಗಾಥೆ ಮುಂದುವರಿದಿರುವುದು ಸಂತೋಷದ ವಿಚಾರ. ಈ ಯಶಸ್ಸು ಮುಂದೆ ಇನ್ನಷ್ಟು ಯುವಕರಿಗೆ ವೈಜ್ಞಾನಿಕ ಕೋಳಿ ಸಾಕಾಣೆಯಲ್ಲಿ ತೊಡಗಲು ಸ್ಪೂರ್ತಿಯಾಗಬಹುದು.
ಹೆಚ್ಚಿನ ಮಾಹಿತಿಗಾಗಿಆಸಕ್ತರು ಸಂಸ್ಥೆಯ ವೆಬ್ ಸೈಟ್ https://www.bharathagrovet.com/ ಗೆ ಭೇಟಿ ನೀಡಬಹುದು.
ಶೂನ್ಯ ಮಾಲಿನ್ಯ ಘಟಕ
ಭಾರತ್ ಪ್ರೆಶ್ ಚಿಕನ್ಸ್ ಕೋಳಿ ಮಾಂಸ ಸಂಸ್ಕರಣಾ ಘಟಕ ಶೂನ್ಯ ಮಾಲಿನ್ಯ ಸಾಧನೆ ಮಾಡಿದೆ. ಘಟಕದ ಘನ ತ್ಯಾಜ್ಯವನ್ನು ರೆಂಡರಿಂಗ್ ಪ್ರಕ್ರಿಯೆಯ ಮೂಲಕ ಮೀನು ಮತ್ತು ಇತರ ಸಾಕು ಪ್ರಾಣಿಗಳ ಆಹಾರವನ್ನಾಗಿ ಬದಲಿಸಲಾಗುತ್ತದೆ. ದ್ರವತ್ಯಾಜ್ಯವನ್ನು ಬಯೋಗ್ಯಾಸ್ಘಟಕಕ್ಕೆ ಬಳಸಿ ಅನಿಲ ಉತ್ಪಾದಿಸಲಾಗುತ್ತದೆ, ಬಳಿಕ ಅದು ಕೃಷಿಗೆ ಬೇಕಾದ ನೀರಾಗಿ ಬಳಕೆಯಾಗುತ್ತದೆ. ಘಟಕದಿಂದ ಉತ್ಪಾದನೆಯಾಗುವ ಅನಿಲ ರೂಪದ ತ್ಯಾಜ್ಯವನ್ನು ಬಯೋಗ್ಯಾಸ್ ಫಿಲ್ಟರ್ ಬಳಸಿ ಕೆಟ್ಟ ವಾಸನೆ ಬರದಂತೆ ಶುದ್ಧಗೊಳಿಸಲಾಗುತ್ತದೆ. ಕೋಳಿ ಮಾಂಸ ತಯಾರಿಕಾ ಘಟಕದಿಂದ ಉತ್ಪತ್ತಿಯಾಗುವ ವಸ್ತುಗಳನ್ನು ಮರುಬಳಕೆ ಮಾಡುವುದರಿಂದ ಮಾಲಿನ್ಯ ತಪ್ಪುವುದರ ಜೊತೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
ಪೌಲ್ಟ್ರಿ ಬಗೆಗಿನ ಮಿಥ್ಯೆಗಳು
ಪೌಲ್ಟ್ರಿ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಕೋಳಿಗಳು ಬೇಗ ಬೆಳೆಯಲು ಸ್ಟಿರಾಯ್ಡ್ ಚುಚ್ಚುತ್ತಾರಂತೆ, ಕೆಮಿಕಲ್ ಬಳಸುತ್ತಾರಂತೆ, ಅದನ್ನು ತಿಂದರೆ ಮಕ್ಕಳು ಬೇಗನೆ ಪ್ರೌಢಾವಸ್ಥೆಗೆ ಬರುತ್ತಾರಂತೆ ಹೀಗೆಲ್ಲಾ ಸಾಕಷ್ಟು ಮಿಥ್ಯೆಗಳಿವೆ. ಆದರೆ ಕೋಳಿ ಸಾಕಾಣೆ ಕ್ಷೇತ್ರದಲ್ಲಿ ಆಗಿರುವಷ್ಟು ಸಂಶೋಧನೆ ಮನುಷ್ಯನ ಆಹಾರದ ಬಗ್ಗೆಯೂ ಆಗಿಲ್ಲ. ಕೋಳಿ ಸಾಕಾಣಿಕೆಯಲ್ಲಿ ಪಾಲಿಸಲಾಗುವ ವೈಜ್ಞಾನಿಕ ವಿಧಾನ ಅದನ್ನು ಸಾಕಷ್ಟು ಅಪಾಯ ರಹಿತವಾಗಿಸಿದೆ. ಕೋಳಿ ಮಾಂಸ ಅತ್ಯಂತ ಕಡಿಮೆ ದರದಲ್ಲಿ ಸಿಗುವ ಶ್ರೇಷ್ಠ ಪ್ರೊಟೀನ್ ಆಗಿದೆ.