ಪುತ್ತೂರು: ವಿಶೇಷ ಕಾರಣಿಕತೆಯನ್ನು ಹೊಂದಿರುವ ಭಕ್ತಿಯಿಂದ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಟ್ಯಾರು ಕಲ್ಲಕಟ್ಟದಲ್ಲಿ ಶ್ರೀ ರಾಜಗುಳಿಗ ದೈವದ ಸಾನಿಧ್ಯದಲ್ಲಿ ನೆಲೆಯಾಗಿರುವ ಗುಳಿಗ ದೈವದ ಕೋಲವು ಫೆಬ್ರವರಿ ತಿಂಗಳ 23 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಪ್ರಗತಿಪರ ಕೃಷಿಕರು, ಉದ್ಯಮಿ ಮೋಹನ್ದಾಸ್ ರೈ ಕುಂಬ್ರರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಆಮಂತ್ರಣ ಮುದ್ರಣದ ಸಂಪೂರ್ಣ ಖರ್ಚನ್ನು ಮೋಹನ್ದಾಸ ರೈ ಕುಂಬ್ರರವರು ಭರಿಸಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು, ಕಾರ್ಯದರ್ಶಿ ನವೀನ್ ಸಾಲಿಯಾನ್ ಹಾಗೂ ಸಮಿತಿಯ ಪದಾಧಿಕಾರಿಗಳು ಪ್ರಧಾನ ಸೇವಕರು ಊರಿನ ಭಕ್ತಾಭಿಮಾನಿಗಳು ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಉಪಸ್ಥಿತರಿದ್ದರು.
ಶ್ರೀ ರಾಜಗುಳಿದ ದೈವದ ಕೋಲವು ಫೆ.23 ರಂದು ನಡೆಯಲಿದ್ದು, ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ ಶ್ರೀ ರಾಜಗುಳಿಗ ದೈವದ ವಿಜೃಂಭಣೆಯ ಕೋಲ ನಡೆಯಲಿದೆ. ಕೋಲ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾನಿಧ್ಯದ ಪ್ರಕಟಣೆ ತಿಳಿಸಿದೆ.