ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ.12ರಂದು ನಡೆಯಲಿದೆ.
ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದರು. ಅತಿಥಿಗಳಾಗಿ ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಕೆನರಾ ಬ್ಯಾಂಕ್ ರೀಜನಲ್ ಆಫೀಸ್ನ ಸೀನಿಯರ್ ಮೆನೇಜರ್ ಸಂಜೀವ ನಾಯ್ಕ್, ಎ ತಿಮ್ಮಪ್ಪ ರೈ ಪಾಪೆಮಜಲು, ಪ್ರಗತಿಪರ ಕೃಷಿಕರಾದ ಚೆನ್ನಪ್ಪ ರೈ ದೇರ್ಲ, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಆಫೀಸರ್ ನಾರಾಯಣ ರೈ ಪಾಪೆಮಜಲು, ಕುಂಬ್ರ ಮಾತೃಶ್ರೀ ಅರ್ಥ್ ಮೂವರ್ಸ್ನ ಮೋಹನದಾಸ ರೈ, ನಿವೃತ್ತ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಭಾಗವಹಿಸಲಿದ್ದಾರೆ.
ಹವಾನಿಯಂತ್ರಿತ ಕಂಪ್ಯೂಟರ್ ಕೊಠಡಿ, ಗ್ರಂಥಾಲಯ ಹಾಗೂ ಎಂಆರ್ಪಿಎಲ್, ಸಿಎಸ್ಆರ್ ಅನುದಾನದಿಂದ ನಿರ್ಮಾಣಗೊಂಡ ನೂತನ ಶೌಚಾಲಯ ಕಟ್ಟಡವನ್ನು ಶಾಸಕ ಅಶೋಕ್ ಕುಮಾರ್ ರೈ, ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ ಹಾಗೂ ಎಂಆರ್ಪಿಎಲ್ನ ಕೃಷ್ಣ ಹೆಗ್ಡೆ ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ತಾಲೂಕು ಅಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ ಎನ್, ಕೌಡಿಚ್ಚಾರು ಕುಂಬಾರರ ಗುಡಿ ಕೈಗಾರಿಕಾ ಸಂಘದ ನಿರ್ದೇಶಕರಾದ ಶಿವಪ್ಪ ಕುಲಾಲ್, ಪ್ರಗತಿಪರ ಕೃಷಿಕ ವಸಂತ ರೈ ಕುತ್ಯಾಡಿ, ಅರಿಯಡ್ಕ ಗ್ರಾ.ಪಂ ಮಾಜಿ ಸದಸ್ಯ ಸುಬ್ರಾಯ ಬಲ್ಯಾಯ ಮದ್ಲ, ಬೆಂಗಳೂರಿನ ಯುವ ಉದ್ಯಮಿ ಸುನಿಲ್ ಕುಮಾರ್ ರೈ ಫಾಲ್ಗುಣಿ ಭಾಗವಹಿಸಲಿದ್ದಾರೆ ಎಂದು ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಹಾಗೂ ಶಾಲಾ ಮುಖ್ಯಗುರು ಬಿ ಮೋನಪ್ಪ ಪೂಜಾರಿ ತಿಳಿಸಿದ್ದಾರೆ.