ನಿಡ್ಪಳ್ಳಿ:ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ವರ್ಷಾವಧಿ ಜಾತ್ರೋತ್ಸವ ಜ.19 ರಿಂದ 24 ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಜ.10 ರಂದು ನಡೆಯಿತು.
ಗುತ್ತು ಚಾವಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಉಳ್ಳಾಕುಲು ಮೂಲ ಸ್ಥಾನದಲ್ಲಿ ಅಂಗಣಕ್ಕೆ ಹಾರೆ ಹಾಕುವ ಕಾರ್ಯಕ್ರಮ ನಡೆಯಿತು. ನಂತರ ಬುಳೆನಡ್ಕ ತೋಟಕ್ಕೆ ತೆರಳಿ ಗೊನೆ ಕಡಿಯಲಾಯಿತು.
ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಪಟ್ಟಾದೀಶ ಪ್ರವೀಣ್.ಎನ್ ಆರಿಗ ನಿಡ್ಪಳ್ಳಿ ಗುತ್ತು, ಹಿರಿಯರಾದ ವಾಸುದೇವ ಭಟ್ ಮುಂಡೂರು, ರಾಜಾರಾಮ ಭಟ್ ನಾಕುಡೇಲು, ಬಾರಿಕೆ ಮನೆಯವರು, ದೈವಗಳ ಪಾತ್ರಿಗಳು, ಊರ ಭಕ್ತಾದಿಗಳು ಪಾಲ್ಗೊಂಡರು.