ನಿಡ್ಪಳ್ಳಿ: ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಮಂದಾರಗಿರಿ ನಿಡ್ಪಳ್ಳಿ ಇದರ 8ನೇ ವರ್ಷದ ವಾರ್ಷಿಕೋತ್ಸವ ಫೆ.1 ರಂದು ನಡೆಯಲಿದ್ದು ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಜ.11 ರಂದು ಭಜನಾ ಮಂದಿರದಲ್ಲಿ ನಡೆಯಿತು.
ಭಜನಾ ಮಂದಿರದ ಅಧ್ಯಕ್ಷ ಪದ್ಮನಾಭ ಕುಲಾಲ್.ಜಿ, ಕಾರ್ಯದರ್ಶಿ ರಮೇಶ್ ಪೂಜಾರಿ.ಕೆ, ಕೋಶಾಧಿಕಾರಿ ಕೊಗ್ಗು ಮಣಿಯಾಣಿ.ಜಿ, ಸದಸ್ಯರಾದ ಅಶ್ವಥ ಪೂಜಾರಿ.ಕೆ, ರಾಮಚಂದ್ರ ಮಣಿಯಾಣಿ. ಜಿ, ಸಂತೋಷ ಕುಮಾರ್.ಬಿ, ಸುರೇಶ್ ಕಾನ, ಗಿರೀಶ್ ಗುರಿ ಉಪಸ್ಥಿತರಿದ್ದರು.