ಪುತ್ತೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಆರಾಧ್ಯ ಅತ್ಯುತ್ತಮ ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಶ್ರೀ ಶಾರದಾ ಕಲಾಕೇಂದ್ರ ಪುತ್ತೂರು ಇಲ್ಲಿಯ ಗುರುಗಳಾದ ವಿಧ್ವಾನ್ ಸುದರ್ಶನ್ ಎಂ.ಎಲ್. ಭಟ್ ಹಾಗೂ ವಿದುಷಿ ದೀಪ್ತಿ ದೊಡ್ಡಕಜೆ ಇವರ ಶಿಷ್ಯೆಯಾಗಿದ್ದು, ಪ್ರಸ್ತುತ ಬುಶ್ರಾ ಆಂಗ್ಲಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಆರಾಧ್ಯ ಪೆರಿಗೇರಿ ರವಿರಾಜ ಬೋರ್ಕರ್ ಮತ್ತು ಹೇಮಮಾಲಿನಿ ದಂಪತಿಗಳ ಪುತ್ರಿ.
ಸೀನಿಯರ್ ಪರೀಕ್ಷೆಯಲ್ಲಿ ಅಭಿಜ್ಞಾ ಪಿ. ಉತ್ತೀರ್ಣ
ಕರ್ನಾಟಕ ರಾಜ್ಯ ಡಾ. ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅಭಿಜ್ಞಾ ಪಿ. ಅತ್ಯುತ್ತಮ ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಶ್ರೀ ಶಾರದಾ ಕಲಾಕೇಂದ್ರ ಪುತ್ತೂರು ಇಲ್ಲಿಯ ಗುರುಗಳಾದ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ಹಾಗೂ ವಿದುಷಿ ದೀಪ್ತಿ ದೊಡ್ಡಕಜೆ ಇವರ ಶಿಷ್ಯೆಯಾಗಿದ್ದು, ಪ್ರಸ್ತುತ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕ್ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ.
ಅಭಿಜ್ಞಾ ಪೆರಿಗೇರಿ ರವಿರಾಜ ಬೋರ್ಕರ್ ಮತ್ತು ಹೇಮಮಾಲಿನಿ ದಂಪತಿಗಳ ಪುತ್ರಿ.