ನಾವು ನುಡಿದಂತೆ ನಡೆದಿದ್ದೇವೆ: ಶಾಸಕ ಅಶೋಕ್ ರೈ
ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೊಟ್ಟ ಮಾತಿನಂತೆ ಪಾಲ್ತಾಡಿ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆಗೆ ಕಾಲು ಸಂಕ ನಿಮಾಣಕ್ಕೆ 40 ಲಕ್ಷ ಅನುದಾನವನ್ನು ನೀಡಿದ್ದೇನೆ. ಕೊಟ್ಟ ಮಾತಿನಂತೆ ನಾನು ನಡೆದುಕೊಂಡಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೊಳ್ತಿಗೆ ಗ್ರಾಮದ ಪಾಲ್ತಾಡಿ ಶ್ರೀವಿಷ್ಣುಮೂರ್ತಿ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಕಾಲು ಸಂಕಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಈ ದೇವಸ್ಥಾನಕ್ಕೆ ತೆರಳುವ ರಸ್ತೆ ಮಧ್ಯೆ ಸಣ್ಣ ಹೊಳೆ ಇದ್ದು ಅದಕ್ಕೆ ಕಾಲು ಸಂಕ ಆಗಬೇಕೆಂದು ಇಲ್ಲಿನ ಭಕ್ತಾಧಿಗಳು ಹಲವು ವರ್ಷದಿಂದ ಪ್ರಯತ್ನಪಟ್ಟಿದ್ದರು. ಆದರೆ ಯಾರು ಕೂಡಾ ಇವರ ಬೇಡಿಕೆಯನ್ನು ಮನ್ನಿಸಿರಲಿಲ್ಲ. ಈ ಊರಿನವರೇ ಪ್ರಭಾವಿ ರಾಜಕಾರಣಿಗಳಿದ್ದರೂ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಬೇಕಿತ್ತು ಆದರೆ ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಕಾಂಕ್ರೀಟ್ ಮಾಡಬೇಕಿದೆ ಎಂದು ಹೇಳಿದರು. ದೇವಸ್ಥಾನದ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಪಿ ಆಳ್ವ ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ ಎಸ್, ಗ್ರಾಪಮ ಸದಸ್ಯರಾದ ಶುಭಲತಾ ಜೆ ರೈ, ಪಿ ಬಿ ಸುಂದರ, ವಿಲಾಸ್ ರೈ ಪಾಲ್ತಾಡ್, ವಿನೋದ್ ರೈ ಪಾಲ್ತಾಡ್, ಜಗನ್ನಾಥ ರೈ ಮಣಿಕ್ಕರ, ಹರಿಕೃಷ್ಣಭಟ್, ಲಕ್ಷ್ಮಿ ನಾರಾಯಣ ಶ್ಯಾನುಬಾಗ್, ಶ್ರೀನಿವಾಸ್ ಕುಂಜತ್ತಾಯ, ಸುಖಿತ್ ರೈ ಪಾಲ್ತಾಡ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ವಿನೋದ್ ರೈ ಕೊಳ್ತಿಗೆ , ಗುತ್ತಿಗೆದಾರ ರಾಕೇಶ್ ರೈ ಕುದ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.