ಕಡಬ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗಳ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.
ನೂತನ ಸದಸ್ಯರಾಗಿ ಅರ್ಚಕ ಸ್ಥಾನಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ, ಸಾಮಾನ್ಯ ಸ್ಥಾನಕ್ಕೆ ನೀರಜ್‌ಕುಮಾರ್ ರೈ ಆರುವಾರ, ಸುನಿತ್‌ರಾಜ್ ಶೆಟ್ಟಿ ಬಂತೆಜಾಲು, ಯತೀಶ ವಿ.ಎನ್.ಗುಂಡಿಜೆ, ಸಂಜೀವ ಮಡಿವಾಳ ಸುದೆಂಗಲ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಮಹಿಳಾ ಸ್ಥಾನಕ್ಕೆ ಮೀನಾಕ್ಷಿ ಮುಂಡೈಮಾರ್, ಸುಜಾತ ಜೆ ಶೆಟ್ಟಿ ಬಡಿಲ, ಪರಿಶಿಷ್ಠ ಜಾತಿ/ಪರಿಶಿಷ್ಟ ಪಂಗಡ ಸ್ಥಾನಕ್ಕೆ ಗೋಪಾಲ ನಾಯ್ಕ ಸಿಗೇತ್ತಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.