ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ತುಲಾಭಾರ ಸೇವೆ 

0

ಬಡಗನ್ನೂರು: ಜ.13 ರಂದು ಪ್ರಾತಃಕಾಲ ಕ್ಷೇತ್ರಕ್ಕೆ ತಂತ್ರಿಗಳ ಆಗಮನದೊಂದಿಗೆ, ದೇವರಿಗೆ ಸ್ವರ್ಣಗಿಂಡಿ, ಸ್ವರ್ಣಾಭರಣಗಳನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು. ಬಳಿಕ ದ್ವಾರಪಾಲಕರಾದ ಜಯ-ವಿಜಯರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಅಶ್ವತ್ಥಕಟ್ಟೆಯ ಲೋಕಾರ್ಪಣೆ ನಡೆಯಿತು.

ಶ್ರೀ ಕ್ಷೇತ್ರದ ಮೂಲಸ್ಥಾನ ಪವಿತ್ರ ತೀರ್ಥದ ಕಲ್ಲಿನಿಂದ ಶಂಖ, ಜಾಗಟೆ, ವಾದ್ಯಮೇಳದೊಂದಿಗೆ ಹೊರಟು, ತೀರ್ಥ ತಂದು, ಮಹಾಗಣಪತಿ ಹವನ, ನವಕಾಭಿಷೇಕ ನಡೆಯಿತು. ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಪಲ್ಲಪೂಜೆ, ಬಲಿಹೊರಡುವುದು, ಪ್ರಸಾದ ವಿತರಣೆ, ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.

ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ  ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು.

ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಬೆಳಗ್ಗೆ ಗಂ 8 ರಿಂದ ಸರ್ವಶಕ್ತಿ ಮಹಿಳಾ ಭಜನಾ ತಂಡ ಪಡುಮಲೆ ಮತ್ತು ವರಮಹಾಲಕ್ಷ್ಮೀ ಮಹಿಳಾ ಭಜನಾ ತಂಡ ಪಡುಮಲೆ ಇವರಿಂದ ಭಜನಾ ಸಂಕೀರ್ತನೆ,10 ರಿಂದ ತುಳು ಅಪ್ಪೆಕೂಟ ಪುತ್ತೂರು ಇವರಿಂದ ‘ತುಳುನಾಡ ಬಲಿಯೇಂದ್ರ’ ತುಳು ತಾಳಮದ್ದಲೆ ನಡೆಯಿತು.

ಜ.12 ರಂದು ಹಸಿರುವಾಣಿ ಹೊರೆಕಾಣಿಕೆ ವಿಜೃಂಭಣೆಯಿಂದ ನಡೆದು ಸಂಜೆ ಉಗ್ರಾಣ ತುಂಬಿಸುವುದು, ಕಾರ್ತಿಕ ಪೂಜೆ, ಮಹಾಪೂಜೆ, ಮಹಾ ಗಣಪತಿ ಪೂಜೆ, ಅತ್ತಾಳ ಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ ಬಳಿಕ. ಅನ್ನಪ್ರಸಾದ ವಿತರಣೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸುಜಾತ ಸುಧೀರ್ – ನಾಟ್ಯಶಿವ ನೃತ್ಯಶಾಲೆ ಕಾಸರಗೋಡು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ ಜತೆ ಕಾರ್ಯದರ್ಶಿ ಸುರೇಶ್ ಪಲ್ಲತ್ತಾರು,  ಕೋಶಾಧಿಕಾರಿ ರಾಜೇಶ್ ರೈ ಮೇಗಿನಮನೆ,  ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು ಹಾಗೂ ಸಮಿತಿ ಸದಸ್ಯರುಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here