ರಾಮಕುಂಜ: ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ, ನೇರೆಂಕಿಗುತ್ತು ಇಲ್ಲಿ ಶ್ರೀ ದೈವಗಳ ನೇಮೋತ್ಸವ ಜ.12 ಹಾಗೂ 13ರಂದು ನಡೆಯಿತು.
ಜ.12ರಂದು ಸಂಜೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ, ಪರಿವಾರ ದೈವಗಳ ಮತ್ತು ಶ್ರೀ ಬ್ರಹ್ಮಬೈದರ್ಕಳ ಭಂಡಾರ ತೆಗೆಯಲಾಯಿತು. ರಾತ್ರಿ ಕಲ್ಲುರ್ಟಿ ದೈವದ ನೇಮ, ಬಳಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ದೈಯೊಂಕ್ಲು, ಮೈಸಂದಾಯ, ಧೂಮಾವತಿ, ಭಾವನ ದೈವದ ನೇಮ ನಡೆಯಿತು.
ಜ.13ರಂದು ಪೂರ್ವಾಹ್ನ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವದ ನೇಮ ನಡೆದು ಮಧ್ಯಾಹ್ನ ಬಟ್ಟಲು ಕಾಣಿಕೆ, ಕೈ ಕಾಣಿಕೆ, ಹರಕೆ ಸಮರ್ಪಣೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬ್ರಹ್ಮಬೈದರ್ಕಳ ಗರಡಿ ಇಳಿಯುವುದು, ಅನ್ನಸಂತರ್ಪಣೆ, ಬೈದೇರುಗಳು ಮೀಸೆ ಧರಿಸುವುದು, ಮಾಣಿ ಬಾಲೆ ಗರಡಿ ಇಳಿಯುವುದು, ಕೋಟಿ ಚೆನ್ನಯ ದರ್ಶನ ಪಾತ್ರಿಗಳ ಸೇಟ್, ಬೈದೇರುಗಳ ಸೇಟ್, ಕಂಚಿಕಲ್ಲಿಗೆ ಕಾಯಿ ಹೊಡೆಯುವ ಕಾರ್ಯಕ್ರಮ ನಡೆಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರರಾದ ಪುತ್ತೂರು ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ, ಆಡಳಿತ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಇ.ಕಲ್ಲೇರಿ, ಅಧ್ಯಕ್ಷ ನಾರಾಯಣ ಭಟ್ ಟಿ.ರಾಮಕುಂಜ, ಉಪಾಧ್ಯಕ್ಷ ಪ್ರಸನ್ನ ನಿಸರ್ಗ, ಕಾರ್ಯದರ್ಶಿ ಕಿರಣ್ ಪಾದೆ, ಜೊತೆ ಕಾರ್ಯದರ್ಶಿ ಶ್ಯಾಮ್ಪ್ರಸಾದ್ ಕಾಯಾರ ಸಮಿತಿ ಸದಸ್ಯರು, ಗ್ರಾಮಸ್ಥರು, ಸಾವಿರಾರು ಭಕ್ತರು ನೇಮೋತ್ಸವದ ವೇಳೆ ಉಪಸ್ಥಿತರಿದ್ದರು.