ಆಲಂಕಾರು: ರಾಮಕುಂಜ ಗ್ರಾಮದ ಕೊಂಡಪ್ಪಾಡಿ ಅನಂತ ಪದ್ಮನಾಭ ದೇವಸ್ಥಾನಕ್ಕೆ ಜ. 12 ರಂದು ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಪಾದಂಗಳವರು ಭೇಟಿ ನೀಡಿ, ತಮ್ಮ ಮಠದ ಪಟ್ಟದ ದೇವರು ಶ್ರೀ ಯೋಗಾನರಸಿಂಹ ಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ದೇವಸ್ಥಾನದಲ್ಲಿ ಗಣಪತಿ ಹವನ, ದೇವೀ ಸಪ್ತಶತಿಪಾರಾಯಣ, ಹಾಗೂ ವರ್ಷದ ಭಜನೋತ್ಸವ ಕಾರ್ಯಕ್ರಮವನ್ನು ನೇರವೆರಿಸಲಾಯಿತು.ಪರ್ಲತ್ತಾಯ ಕುಟುಂಬ ಸದಸ್ಯರು, ವಿವಿಧ ಭಜನಾ ತಂಡಗಳು ಭಜನೆಯನ್ನು ನೇರವೆರಿಸಿದರು.
ಮಧ್ಯಾಹ್ನ ಮಹಾಪೂಜೆ ನಡೆದ ಬಳಿಕ, ಕಾಣಿಯೂರು ಶ್ರೀಗಳಿಗೆ ಭಿಕ್ಷೆ ಸೇವೆಯನ್ನು ಪೆರ್ಲತ್ತಾಯ ಕುಟುಂಬಸ್ಥರಿಂದ ಸಲ್ಲಿಸಲಾಯಿತು. ನಂತರ ಸ್ವಾಮೀಜಿಗಳು
ಅನುಗ್ರಹ ಭಾಷಣದಲ್ಲಿ , ತಮ್ಮ ಶಿಷ್ಯ ವರ್ಗವಾದ ಪರ್ಲತ್ತಾಯ ಕುಲಕ್ಕೂ , ಶ್ರೀ ಮಠಕ್ಕೂ ಇರುವ ಅವಿನಾಭಾವ ಸಂಬಂಧವನ್ನು ನೆನಪಿಸಿದರು. ಅವರ ಪೂರ್ವ ಗುರುಗಳು ಕೊಂಡಪ್ಪಾಡಿ ದೇಗುಲಕ್ಕೆ , ಶ್ರೀ ಲಕ್ಷ್ಮೀ ನಾರಾಯಣನ ಪ್ರತಿಮೆ ಹಾಗೂ ನಗರಿ ದೊಡ್ಡ ಮನೆಗೆ ಶ್ರೀ ರಾಮ, ಲಕ್ಷ್ಮಣ , ಸೀತಾದೇವಿಯ ಪ್ರತಿಮೆಯನ್ನು ನೀಡಿದ್ದನ್ನು ಜ್ಞಾಪಿಸಿದರು. ಪರ್ಲತ್ತಾಯ ಕುಲ ಬಂಧುಗಳು , ನಿರಂತರವಾಗಿ ಮಠದ ಸಂಪರ್ಕದಲ್ಲಿದ್ದು,ಭೇಟಿ ಮಾಡುತ್ತಿರಿ ಎಂದರು.
ಆನಂತ ಪದ್ಮನಾಭ ದೇವಸ್ಥಾನದ ಮೊಕ್ತೇಸರ ಪಿ. ಯಸ್.ಗೋಕುಲ್, ಪರ್ಲತ್ತಾಯ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಸನ್ನಮೂರ್ತಿ ಆಚಾರ್, ಹಿರಿಯ ಸದಸ್ಯರಾದ ತುಂಬ್ಯ ಶ್ರೀನಿವಾಸ ಆಚಾರ್ಯ, ತೋಟ ರವೀಂದ್ರ ಭಟ್,ರವಿರಾಜ್ ರಾವ್ ನಗ್ರಿ ಹಾಗೂ ಭಕ್ತಾದಿಗಳು ಸ್ವಾಮೀಜಿಗಳನ್ನು ಸ್ವಾಗತಿಸಿದರು. ಪ್ರಸನ್ನ ಮೂರ್ತಿ ಆಚಾರ್ಯ ದಂಪತಿಗಳು ಶ್ರೀಗಳ ಪಾದಪೂಜೆ ನೆರವೇರಿಸಿದರು.
ಸ್ವಾಮಿಜೀಗಳಿಗೆ ಪಾದಕಾಣಿಕೆ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅನುಗ್ರಹ ಭಾಷಣದ ಬಳಿಕ, ಶ್ರೀ ಗಳಿಂದ ಮಂತ್ರಾಕ್ಷತೆ ವಿತರಣೆಯಾಗಿ,ಶ್ರೀದೇವರ ಪ್ರಸಾದ,ಪ್ರಸಾದ ಭೋಜನ ನಡೆಯಿತು. ದೇವಸ್ಥಾನದ ಅರ್ಚಕರಾದ ರಾಮಶಂಕರ ಮುಚ್ಚಿಂತ್ತಾಯ ಪೂಜಾವಿಧಿವಿಧಾನ ನೇರವೆರಿಸಿದರು.