ಅರಿಯಡ್ಕ: ಬಾಲವಿಕಾಸ ಸಮಿತಿ ಮಜ್ಜಾರಡ್ಕ ಅಂಗನವಾಡಿ ಕೇಂದ್ರ ನೇತೃತ್ವದಲ್ಲಿ ಮಜ್ಜಾರಡ್ಕ ಅಂಗನವಾಡಿ ಬಾಲಮೇಳ ಜ.12 ರಂದು ನಡೆಯಿತು.
ಕಾರ್ಯಕ್ರಮವನ್ನು ಅಂಗನವಾಡಿ ಕೇಂದ್ರದ ಪುಟಾಣಿ ಶ್ಲೋಕ್ ವೈ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಸುದ್ದಿ ಮಾಧ್ಯಮದ ಪ್ರತಿನಿಧಿ ತಿಲಕ್ ರೈ ಕುತ್ಯಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಆರತಿ, ಪಂಚಾಯತ್ ಸದಸ್ಯೆ ಉಷಾ ರೇಖಾ ರೈ ಕೊಳ್ಳಾಜೆ, ಚಂದಪ್ಪ ಪೂಜಾರಿ ಮಜ್ಜಾರು, ಉಪಸ್ಥಿತರಿದ್ದು ಶುಭ ಹಾರೈಸಿದರು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸೌಮ್ಯ ಜನಾರ್ದನ ಸಭಾಧ್ಯಕ್ಷತೆ ವಹಿಸಿದ್ದರು.
ಸಮಾರೋಪ
ಬಾಲವಿಕಾಸ ಸಮಿತಿ ಅಧ್ಯಕ್ಷೆ ಸೌಮ್ಯ ಜನಾರ್ದನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯತ್ ಸದಸ್ಯ ರಾಜೇಶ್ ಮಣಿಯಾಣಿ ತ್ಯಾಗರಾಜೆ ಉಪಸ್ಥಿತರಿದ್ದರು.
ಸನ್ಮಾನ
ಕಾರ್ಯಕ್ರಮದಲ್ಲಿ ರೇಖಾ ಬಾಲಕೃಷ್ಣ, ಶಮಿಲತಾ ಪುರುಷೋತ್ತಮ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದ ಅಶ್ಮಿತ, ಅಂಗನವಾಡಿ ಕೇಂದ್ರದ ಹಿರಿಯ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ಗಗನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜ್ಯೋತಿ, ಲಾವಣ್ಯ,ಮುಸಾಬ್, ಪ್ರೇಮ ಲತಾ,ಶಮಿಲತಾ, ನಿಶಾ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವಸಂತಿ, ಸಹಾಯಕಿ ಹೊನ್ನಮ್ಮ, ,ಸ್ತ್ರೀಶಕ್ತಿ ಗುಂಪು ಮಜ್ಜಾರಡ್ಕ, ವಿಷ್ಣು ಯುವ ಶಕ್ತಿ ಬಳಗ ಮಜ್ಜಾರಡ್ಕ, ಹಿಂದೂ ಜಾಗರಣ ವೇದಿಕೆ ತ್ಯಾಗರಾಜ ನಗರ, ಸ್ವ ಸಹಾಯ ಸಂಘ ಗ್ರಾಮೀಣಾಭಿವೃದ್ದಿ ಧರ್ಮಸ್ಥಳ ಸಂಘ ಮಜ್ಜಾರಡ್ಕ ಮುಂತಾದವರು ಸಹಕರಿಸಿದರು.
ದಿವ್ಯಶ್ರೀ ವಜ್ರದುಂಬಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಯಕ್ಷಿತ್ ಗೌಡ ವಂದಿಸಿದರು.