ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮುಂದಿನ ಮೂರು ವರ್ಷದ ಅವಧಿಗೆ ನೂತನ ಸದಸ್ಯರ ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿಯವರು ಆದೇಶಿಸಿದ್ದಾರೆ.


ಅರ್ಚಕ ಸ್ಥಾನಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಉಡುಪ, ಸಾಮಾನ್ಯ ಸ್ಥಾನಕ್ಕೆ ಗುರುಪ್ರಸಾದ್ ಕೆ.ಆರ್.ಶಾರದಾನಗರ, ಯು.ಕರುಣಾಕರ ಪರಿಮಳ ನಿಲಯ ದೊಡ್ಡಉರ್ಕ, ಜಗದೀಶ್ ಎ.ಅಜ್ಜಿಕುಮೇರು, ಮಹೇಶ್ ಬಿ. ಬಾಂತೊಟ್ಟು, ಜಗದೀಶ ಶೆಟ್ಟಿ ಶಾರದಾನಗರ, ಮಹಿಳೆ ಮೀಸಲು ಸ್ಥಾನಕ್ಕೆ ಪುಷ್ಪಾವತಿ ಬಾರಿಂಜ, ಶೈಲಜಾ ಬಿ.ಆಳ್ವ ಗುತ್ತುಮನೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಗುರುವಪ್ಪ ಮುಗೇರ ಕುಂಡಾಜೆ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.

ನೂತನ ಸಮಿತಿಗೆ ಆಡಳಿತಾಧಿಕಾರಿಯಾಗಿದ್ದ ಕಡಬ ಉಪತಹಶೀಲ್ದಾರ್ ಗೋಪಾಲ ಅವರು ಜ.14ರಂದು ಅಧಿಕಾರ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here