ಮೇನಾಲ: ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ದ.ಕ.ಜಿ.ಪ.ಉ.ಹಿ ಪ್ರಾಥಮಿಕ ಶಾಲೆ ಮೇನಾಲ ಇಲ್ಲಿಗೆ ನೀಡಿದ ಬೆಂಚ್ ಡೆಸ್ಕ್ ಗಳನ್ನು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮವನ್ನು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ ರವರು ದೀಪ ಬೆಳಗಿಸಿ ಮಾತನಾಡಿ ಶಾಲೆಯ ಹಳೆ ವಿದ್ಯಾರ್ಥಿ ಸುಂದರ್ ಜಿ ಯವರು ಈ ಭಾಗದ ಸೇವಾ ಪ್ರತಿನಿಧಿಯಾಗಿದ್ದುಕೊಂಡು ಏನೇ ಯೋಜನೆಯಿಂದ ಸೌಲಭ್ಯ ಉಂಟು ಎಂದಾದರೆ ಅವರಿಗೆ ತಕ್ಷಣ ಈ ಶಾಲೆಯ ನೆನಪಾಗುತ್ತೆ. ಹಿಂದಿನಿಂದಲೂ ಶಾಲೆಯ ಕಟ್ಟಡಕ್ಕೆ, ರಂಗಮಂದಿರಕ್ಕೆ ಮತ್ತು ಕಾಂಪೌಂಡು ರಚಣೆಗಾಗಿ ದೊರೆತ ಅನುದಾನವನ್ನು ಮತ್ತೊಮ್ಮೆ ನೆನಪಿಸುತ್ತಾ ಕಾರ್ಯಕ್ರಮಕ್ಕೆ ಶುಭಕೋರಿದರು.
ವಲಯಮೇಲ್ವಿಚಾರಕರಾದ ಹರೀಶ್ ಪ್ರಾಸ್ತಾವಿಕ ನುಡಿಗಳೊಂದಿಗೆ ಯೋಜನೆಯ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರಾಗಿ ಎಸ್.ಡಿ.ಎಂಸಿ ಅಧ್ಯಕ್ಷರಾದ ಅಬ್ದುಲ್ಲ ಮೆಣಸಿನಕಾನ, ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತ ಯೋಜನೆಯಿಂದ ಅನೇಕ ಸೌಲಭ್ಯ ನಮಗೆ ದೊರೆತಿದೆ. ಇನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಒಬ್ಬ ಜ್ಞಾನದೀಪ ಶಿಕ್ಷಕರನ್ನು ಒದಗಿಸಿಕೊಡಬೇಕು ಎಂದು ತಮ್ಮ ಬೇಡಿಕೆಯನ್ನು ತಿಳಿಸಿದರು.
ಶಾಲೆಯ ಮುಖ್ಯ ಗುರುಗಳಾದ ಜಲಜ ಹಾಗೂ ಸಹ ಶಿಕ್ಷಕರುಗಳು, ಗ್ರಾಮ ಪಂಚಾಯತ್ ಸದಸ್ಯ ವೆಂಕಪ್ಪ ನಾಯ್ಕ ಮೇನಾಲ, ಮತ್ತು ಎಸ್.ಡಿ.ಎಂಸಿ ಸದಸ್ಯರು ಹಾಜರಿದ್ದು ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭಕೋರಿದರು. ಶಾಲಾ ಮುಖ್ಯ ಗುರು ಸ್ವಾಗತಿಸಿದರು. ಸಹ ಸಹಶೀಕ್ಷಕಿ ವಾಣಿ ವಂದನಾರ್ಪಣೆ ಮಾಡಿದರು. ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸುಂದರ್ ಜಿ ನಿರೂಪಿಸಿದರು.
ಶಾಲಾ ಮತ್ತು ಎಸ್.ಡಿ.ಎಂಸಿ ವತಿಯಿಂದ ವಲಯ ಮೇಲ್ವಿಚಾರಕರನ್ನು ಹಾಗೂ ಸೇವಾಪ್ರತಿನಿಧಿಯವರನ್ನು ಶಾಲು ಹಾಕಿ ಫಲ ಪುಷ್ಪ ನೀಡಿ ಗೌರವಿಸಲಾಯಿತು.