ಪುತ್ತೂರು:ತಾಲೂಕು ಯುವಜನ ಒಕ್ಕೂಟದ ವತಿಯಿಂದ ಕೊಡಮಾಡುವ 2025ನೇ ಸಾಲಿನ ಪುತ್ತೂರು ತಾಲೂಕಿನ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿಗೆ ಸರ್ವೆ ಗೌರಿ ಮಹಿಳಾ ಮಂಡಲ ಆಯ್ಕೆಯಾಗಿದೆ.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಅಸ್ಮಿ ಕಂಫರ್ಟ್ ಸಭಾಭವನದಲ್ಲಿ ಜ. 15ರಂದು ನಡೆದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ತಾಲೂಕು ಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗೌರಿ ಮಹಿಳಾ ಮಂಡಲದ ಗೌರವ್ಯಾಧ್ಯಕ್ಷೆ ಮೋಹಿನಿ ರಮೇಶ್ ಭಕ್ತಕೋಡಿ, ಅಧ್ಯಕ್ಷೆ ಕುಶಲನಾಗೇಶ್ ಪಟ್ಟೆಮಜಲು, ಕಾರ್ಯದರ್ಶಿ ರಜನಿರಾಜೇಶ್ ಸರ್ವೆದೋಳ , ಸದಸ್ಯರಾದ ಸುಮತಿ ಪರಂಟೋಲು, ಯಶೋಧ ಸರ್ವೆದೋಳ, ರೇಷ್ಮಾ ಸರ್ವೇದೋಳ ಮತ್ತಿತರರು ಪ್ರಶಸ್ತಿ ಸ್ವೀಕರಿಸಿದರು.