ಕಾವು ಪ್ರಾ.ಕೃ.ಪ.ಸ ಸಂಘದ ಅಧ್ಯಕ್ಷರಾಗಿ ನನ್ಯ ಅಚ್ಚುತ ಮೂಡೆತ್ತಾಯ, ಉಪಾಧ್ಯಕ್ಷರಾಗಿ ಮಂಜುನಾಥ ರೈ ಸಾಂತ್ಯ

0

ಕಾವು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷದ ಅವಧಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ನನ್ಯ ಅಚ್ಚುತ ಮೂಡೆತ್ತಾಯ ಮತ್ತು ಉಪಾಧ್ಯಕ್ಷರಾಗಿ ಮಂಜುನಾಥ ರೈ ಸಾಂತ್ಯರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜ.15ರಂದು ಸಂಘದ ಪ್ರಧಾನ ಕಛೇರಿ ಕಾವುನಲ್ಲಿ ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿದ್ದ ಶೋಭಾ ಎನ್ ಎಸ್‌ರವರ ಅಧ್ಯಕ್ಷತೆಯಲ್ಲಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾದ್ದರಿಂದ ಅವಿರೋಧ ಆಯ್ಕೆಯ ಫೋಷಣೆ ಮಾಡಲಾಯಿತು.

ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಶಿವರಾಮ ಪಿ ಈಶ್ವರಮಂಗಲ, ನಹುಷ ಭಟ್ ಪಳನೀರು, ಲೋಕೇಶ್ ಚಾಕೋಟೆ, ರಮೇಶ್ ಪೂಜಾರಿ ಮುಂಡ್ಯ, ನವೀನ ಎನ್, ರಾಮಣ್ಣ ನಾಯ್ಕ ಕುದ್ರೋಳಿ, ಲೋಹೀತ್ ಅಮ್ಚಿನಡ್ಕ, ಮೋಹನಾಂಗಿ ಬೀಜಂತ್ತಡ್ಕ, ತಾರಾ ಎಂ, ಪ್ರಪುಲ್ಲಾ ಆರ್ ರೈ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರತಿನಿಧಿ ಶರತ್ ಡಿ., ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿಯವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here