ಪುತ್ತೂರು: ಮೊಟ್ಟೆತ್ತಡ್ಕಕ್ಕೆ ಹೋಗುವ ಮೊದಲ ತಿರುವಿನ ಹತ್ತಿರ ಕಾರ್ಯಾಚರಿಸುತ್ತಿರುವ ಸಾಯಿ ಮೋಟಾರ್ಸ್ ಗ್ಯಾರೇಜಿನ ಉದ್ಯೋಗಿ, ಪಂಜಳ ನಿವಾಸಿ ವಿನಯ್(25ವ.)ರವರು ಜ.14 ರಂದು ರಾತ್ರಿ ಮಂಗಳೂರಿನಲ್ಲಿ ನಿಧನರಾದರು.
ವಿನಯ್ ರವರಿಗೆ ಜ್ವರ ಕಾಣಿಸಿದ್ದು, ಜ್ವರ ಉಲ್ಬಣವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ವಿನಯ್ ರವರು ಅನಿಲ್ ಮಾಲೀಕತ್ವದ ಸಾಯಿ ಮೋಟಾರ್ಸ್ ನಲ್ಲಿ ಕಳೆದ ಐದು ವರುಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.
ಮೃತರು ತಂದೆ ಬಾಲಕೃಷ್ಣ ನಾಯ್ಕ್, ತಾಯಿ ಸೀತಕ್ಕ, ಸಹೋದರರನ್ನು ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಮೃತರ ಮನೆಗೆ ಸಾಯಿ ಮೋಟಾರ್ಸ್ ಮಾಲಕ ಅನಿಲ್, ಮಹಾಲಿಂಗೇಶ್ವರ ವುಡ್ ಇಂಡಸ್ಟ್ರಿಯಲ್ ಏರಿಯಾದ ಹರೀಶ್ ಕುಮಾರ್, ಮಂಜ, ಸೌಹಾರ್ದ ಪಿಕಪ್ ಮಾಲಕ ಆದಂ ಮೊಟ್ಟೆತ್ತಡ್ಕ, ದರ್ಬೆ ಸ್ಟ್ಯಾಂಡರ್ಡ್ ಆಟೋ ವರ್ಕ್ಸ್ ನ ಫ್ರಾನ್ಸಿಸ್ ಡಿ’ಸೋಜ, ಅವಿನಾಶ್ ಕೆ ತೆರಳಿ ಸಂತೈಸಿದರು.