ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಶಿಬರಾಡಿ ಬಾರಿಕೆ ಕುಂದರ್ ಕುಟುಂಬದಲ್ಲಿ ಗ್ರಾಮದ ಉಳ್ಳಾಕುಲು, ಮಹಿಷಂತಾಯ ಮತ್ತು ಪಿಲಿಚಾಮುಂಡಿ ದೈವಗಳಿಗೆ ತಂಬಿಲ ಸೇವೆ ಹಾಗೂ ತರವಾಡು ಮನೆಯ ದೈವಗಳ ವಾರ್ಷಿಕ ನೇಮೋತ್ಸವವು ಜ.18 ಹಾಗೂ 19 ರಂದು ಶಿಬರಾಡಿ ಬಾರಿಕೆ ತರವಾಡು ಮನೆಯಲ್ಲಿ ನಡೆಯಲಿದೆ.
ಶನಿವಾರದಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ, ಗ್ರಾಮ ದೈವಗಳಿಗೆ ತಂಬಿಲ ಸೇವೆ, ನಾಗದೇವರಿಗೆ ಮತ್ತು ರಕ್ತೇಶ್ವರಿ ಗುಳಿಗನಿಗೆ ತಂಬಿಲ ಸೇವೆ, ಮಧ್ಯಾಹ್ನ ಹರಿಸೇವೆ, ಅನ್ನಸಂತರ್ಪಣೆ, ಸಂಜೆ ಜಾಗದ ರಾಹು ಗುಳಿಗನಿಗೆ ತಂಬಿಲ ಸೇವೆ ಬಳಿಕ ಭಂಡಾರ ತೆಗೆಯುವುದು, ರಾತ್ರಿ ಅನ್ನ ಸಂತರ್ಪಣೆ, ಕಲ್ಲುರ್ಟಿ ಹಾಗೂ ಕಲಾಲ್ದಗುಳಿಗ ನೇಮ, ವರ್ಣರ ಹಾಗೂ ಕುಪ್ಪೆ ಪಂಜುರ್ಲಿ ನೇಮ ನಡೆಯಲಿರುವುದು. ಆದಿತ್ಯವಾರದಂದು ಬೆಳಿಗ್ಗೆ ಧರ್ಮದೈವ ಧೂಮಾವತಿ ನೇಮ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿರುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಶಿಬರಾಡಿ ಬಾರಿಕೆ ತರವಾಡು ಕುಟುಂಬಸ್ಥರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೊನೆ ಮುಹೂರ್ತ
ಶಿಬರಾಡಿ ಬಾರಿಕೆ ಕುಂದರ್ ಕುಟುಂಬದ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಶಿಬರಾಡಿ ಬಾರಿಕೆ ಕುಂದರ್ ಕುಟುಂಬದ ಹಲವರು ಉಪಸ್ಥಿತರಿದ್ದರು.