ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷದ ಅವಧಿಗೆ ನೂತನ ಸದಸ್ಯರನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯ ಕಾರ್ಯದರ್ಶಿ ನೇಮಕಗೊಳಿಸಿ ಆದೇಶಿಸಿದ್ದಾರೆ.
ಸಾಮಾನ್ಯ ಸ್ಥಾನದಿಂದ ಸತೀಶ್ ಗೌಡ ಒಳಗುಡ್ಡೆ, ವೆಂಕಟಕೃಷ್ಣ ಪಾಲೆಚ್ಚಾರು, ನವೀನ ಕರ್ಕೇರಾ ರಾಂಬೈಲು ಉಜ್ರುಪಾದೆ, ನಾರಾಯಣ ಗೌಡ ಕುಕ್ಕುತ್ತಡಿ, ವಾಸುದೇವ ನಾಯ್ಕ ಪದವು, ಪ.ಜಾತಿ ಅಥವಾ ಪ.ಪಂಗಡದಿಂದ ಸತೀಶ್ ನಾಯ್ಕ ಕಾಣದಗುರಿ, ಮಹಿಳಾ ಸ್ಥಾನದಿಂದ ಪ್ರಮೀಳಾ ಚಂದ್ರಶೇಖರ ಗೌಡ ಬ್ರಹ್ಮರಕೋಡಿ, ಲಲಿತಾ ಶಂಕರ ಪಾಟಾಳಿ ಪದವು ಹಾಗೂ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯರವರನ್ನು ನೇಮಕಗೊಳಿಸಲಾಗಿದೆ.